ಮುರ್ಷಿದಾಬಾದ್‌ನಲ್ಲಿ ನಡೆದವಕ್ಫ್‌ ತಿದ್ದುಪಡಿ ವಿಧೇಯಕ ವಿರೋಧಿ ಗಲಭೆಯಿಂದಾಗಿ ಮನೆ-ಮಠ ತೊರೆದು ನೆರೆಯ ಮಾಲ್ಡಾದ ನಿರಾಶ್ರಿತರ ಕೇಂದ್ರದಲ್ಲಿ ಉಳಿದುಕೊಂಡಿರುವ ಹಿಂದೂಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ.

ಕೋಲ್ಕತಾ: ಮುರ್ಷಿದಾಬಾದ್‌ನಲ್ಲಿ ನಡೆದವಕ್ಫ್‌ ತಿದ್ದುಪಡಿ ವಿಧೇಯಕ ವಿರೋಧಿ ಗಲಭೆಯಿಂದಾಗಿ ಮನೆ-ಮಠ ತೊರೆದು ನೆರೆಯ ಮಾಲ್ಡಾದ ನಿರಾಶ್ರಿತರ ಕೇಂದ್ರದಲ್ಲಿ ಉಳಿದುಕೊಂಡಿರುವ ಹಿಂದೂಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ನಿರಾಶ್ರಿತ ಕೇಂದ್ರವನ್ನು ಬಂಧನ ಕೇಂದ್ರವನ್ನಾಗಿ ಪರಿವರ್ತಿಸಿದೆ. ನಿರಾಶ್ರಿತ ಕೇಂದ್ರದಲ್ಲಿರುವವರಿಗೆ ಹೊರಗಿನವರನ್ನು ಭೇಟಿಯಾಗಲೂ ಅವಕಾಶ ನೀಡುತ್ತಿಲ್ಲ, ಅವರ ಪರಿಸ್ಥಿತಿ ನೋಡಲು ಬಿಡುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಸುವೇಂದು ಅಧಿಕಾರಿ ಅವರು, ಧುಲಿಯಾನ್‌ ಮತ್ತು ಷಂಷೇರ್‌ಗಂಜ್‌ನಲ್ಲಿ ನಡೆದ ಗಲಭೆಯಿಂದಾಗಿ ಮನೆ-ಮಠ ತೊರೆದು ಮಹಿಳೆಯರು ಮತ್ತು ಮಕ್ಕಳು ಬೈಶನಾಬ್‌ನಗರ್‌ನ ಹೈಸ್ಕೂಲ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಇವರ ಜತೆಗೆ ರಾಜ್ಯ ಸರ್ಕಾರ ಅಮಾನವೀಯವಾಗಿ ವರ್ತಿಸುತ್ತಿದೆ. ಮಾಧ್ಯಮ, ಸ್ವಯಂಸೇವಾ ಸಂಸ್ಥೆಗಳ ಜತೆ ಮಾತನಾಡದಂತೆ ನೋಡಿಕೊಳ್ಳುತ್ತಿದೆ. ಅವರಿಗೆ ಕಳಪೆ ಆಹಾರ ನೀಡಲಾಗುತ್ತಿದೆ. ಸ್ಥಳೀಯ ಎನ್‌ಜಿಒಗಳು ನೀಡಿದ ಆಹಾರವಸ್ತುಗಳನ್ನು ವಿತರಿಸಲೂ ಪೊಲೀಸರು ಅಡ್ಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.