ಕೆನಡಾದಲ್ಲಿ ಪನ್ನು ಬಂಟ, ಖಲಿಸ್ತಾನಿ ಉಗ್ರ ಇಂದರ್‌ಜೀತ್‌ ಬಂಧನ

| Published : Sep 23 2025, 01:07 AM IST

ಕೆನಡಾದಲ್ಲಿ ಪನ್ನು ಬಂಟ, ಖಲಿಸ್ತಾನಿ ಉಗ್ರ ಇಂದರ್‌ಜೀತ್‌ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಲಿಸ್ತಾನಿ ಉಗ್ರಗಾಮಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನು ಆಪ್ತನಾದ, ಖಲಿಸ್ತಾನಿ ಉಗ್ರ ಇಂದರ್‌ಜೀತ್‌ ಗೋಸಾಲ್‌ನನ್ನು ಕೆನಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಭಾರತ ಮತ್ತು ಕೆನಡಾ ಅಂತಾರಾಷ್ಟ್ರೀಯ ಅಪರಾಧ ತಡೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಆತನ ಬಂಧನವಾಗಿದೆ.

ಒಟ್ಟಾವಾ: ಖಲಿಸ್ತಾನಿ ಉಗ್ರಗಾಮಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನು ಆಪ್ತನಾದ, ಖಲಿಸ್ತಾನಿ ಉಗ್ರ ಇಂದರ್‌ಜೀತ್‌ ಗೋಸಾಲ್‌ನನ್ನು ಕೆನಡಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಭಾರತ ಮತ್ತು ಕೆನಡಾ ಅಂತಾರಾಷ್ಟ್ರೀಯ ಅಪರಾಧ ತಡೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಆತನ ಬಂಧನವಾಗಿದೆ.

ಈತ ಉಗ್ರ ನಿಜ್ಜರ್ ಸಾವಿನ ಬಳಿಕ ದೇಶದಲ್ಲಿ ಸಿಖ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಸಂಘಟನೆಯ ಪ್ರಮುಖ ಸಂಘಟಕನಾಗಿದ್ದ. ಅಲ್ಲದೆ ಪನ್ನೂನ ಭದ್ರತಾ ಅಧಿಕಾರಿಯೂ ಕೆಲಸ ಮಾಡಿದ್ದ.

ಬಂದೂಕುಗಳನ್ನು ಹೊಂದಿದ್ದಕ್ಕೆ ಸಂಬಂಧಿಸಿದ ಹಲವು ಆರೋಪಗಳನ್ನು ಆತ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಕಳೆದೊಂದು ವರ್ಷದಲ್ಲಿ ಪೊಲೀಸರು ಆತನನ್ನು ಬಂಧಿಸುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಕಳೆದ ನವೆಂಬರ್‌ನಲ್ಲಿ ಹಿಂದೂ ದೇವಾಲಯವೊಂದರಲ್ಲಿ ನಡೆದ ಹಿಂಸಾತ್ಮಕ ಘಟನೆಗೆ ಸಂಬಂಧಿಸಿದಂತೆ ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದರು.