ಸಾರಾಂಶ
ಕಾಮಿಡಿಯನ್ ಕಪಿಲ್ ಶರ್ಮಾ ಬ್ರಿಟಿಷ್ ಕೊಲಂಬಿಯಾದಲ್ಲಿ ಸರ್ರೆಯಲ್ಲಿ 2 ದಿನಗಳ ಹಿಂದಷ್ಟೇ ಆರಂಭಿಸಿದ್ದ ‘ಕ್ಯಾಪ್ಸ್ ಕೆಫೆ’ ರೆಸ್ಟೋರೆಂಟ್ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ.
ಒಟ್ಟಾವಾ: ಕಾಮಿಡಿಯನ್ ಕಪಿಲ್ ಶರ್ಮಾ ಬ್ರಿಟಿಷ್ ಕೊಲಂಬಿಯಾದಲ್ಲಿ ಸರ್ರೆಯಲ್ಲಿ 2 ದಿನಗಳ ಹಿಂದಷ್ಟೇ ಆರಂಭಿಸಿದ್ದ ‘ಕ್ಯಾಪ್ಸ್ ಕೆಫೆ’ ರೆಸ್ಟೋರೆಂಟ್ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದಾರೆ.
ಖಲಿಸ್ತಾನಿ ಬೆಂಬಲಿತ ಜರ್ಮನಿ ಮೂಲದ ಬಿಕೆಐ ಸಂಘಟನೆಗೆ ಸೇರಿದ ಹರ್ಜಿತ್ ಸಿಂಗ್ ಅಲಿಯಾಸ್ ಲಡ್ಡಿ ಗುಂಡಿನ ದಾಳಿ ನಡೆಸಿದ್ದಾನೆ. ಕೆಫೆ ಮೇಲೆ 9 ಗುಂಡು ಹಾರಿಸಲಾಗಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೆ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎನ್ನಲಾಗಿದೆ. ಲಡ್ಡಿ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದೆ. ಈತನ ಮಾಹಿತಿಗೆ ಎನ್‌ಐಎ 10 ಲಕ್ಷ ರು.ಬಹುಮಾನ ಘೋಷಿಸಿದೆ.