ತಮ್ಮ ನಿರ್ಭಿಡೆಯ ಮತ್ತು ಸೃಜನಶೀಲ ಬರವಣಿಗೆಯಿಂದ ಸಮಕಾಲೀನ ಸಾಹಿತ್ಯಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಾಗಿ ಕೆನಡಾದ ಕವಯಿತ್ರಿ ಮತ್ತು ಸಾಹಿತಿ ಆ್ಯನ್ನೆ ಕಾರ್ಸನ್‌ ಅವರಿಗೆ 2026ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಗಿದೆ.

-ಪ್ರಾಚೀನ ಗ್ರೀಕ್‌ ಮತ್ತು ರೋಮನ್‌ ಸಾಹಿತ್ಯದಲ್ಲಿ ಪರಿಣತಿ

-ಅನನ್ಯ ಕವಿತೆ, ಪ್ರಬಂಧ, ಕಾದಂಬರಿ ಮೂಲಕ ಜನಪ್ರಿಯಸ್ಟಾಕ್‌ಹೋಂ: ತಮ್ಮ ನಿರ್ಭಿಡೆಯ ಮತ್ತು ಸೃಜನಶೀಲ ಬರವಣಿಗೆಯಿಂದ ಸಮಕಾಲೀನ ಸಾಹಿತ್ಯಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಾಗಿ ಕೆನಡಾದ ಕವಯಿತ್ರಿ ಮತ್ತು ಸಾಹಿತಿ ಆ್ಯನ್ನೆ ಕಾರ್ಸನ್‌ ಅವರಿಗೆ 2026ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಗಿದೆ.

76 ವರ್ಷದ ಕಾರ್ಸನ್‌, ಟೊರೊಂಟೊ ಮೂಲದವರು. ಸದ್ಯ ಐಸ್‌ಲ್ಯಾಂಡ್‌ನಲ್ಲಿ ನೆಲೆಸಿದ್ದಾರೆ. ಪ್ರಾಚೀನ ಗ್ರೀಕ್‌ ಮತ್ತು ರೋಮನ್‌ ಸಾಹಿತ್ಯದ ವಸ್ತು ಹಾಗೂ ಕಥೆಗಳನ್ನು ಆಧಾರವಾಗಿ ಬಳಸಿಕೊಂಡು ಅನನ್ಯವಾದ ಕವಿತೆ, ಪ್ರಬಂಧ ಮತ್ತು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಪ್ರಸಿದ್ಧ ಕೃತಿಗಳಲ್ಲಿ ಪ್ರಾಚೀನ ಗ್ರೀಕ್ ಸಾಹಿತ್ಯದಲ್ಲಿನ ಆಸೆ, ಸುಖ-ದುಃಖಗಳನ್ನು ವಿವರಿಸುವ ‘ಎರೋಸ್‌ ದ ಬಿಟ್ಟರ್‌ಸ್ವೀಟ್‌’, ಪದ್ಯರೂಪದ ಕಾದಂಬರಿ ‘ಆಟೋಬಯಾಗ್ರಫಿ ಆಫ್‌ ರೆಡ್‌’, ‘ನಾರ್ಮಾ ಜೀನ್‌ ಬೇಕರ್‌ ಆಫ್‌ ಟ್ರಾಯ್‌’ ಮುಂತಾದವು ಸೇರಿವೆ. ಶಾಸ್ತ್ರೀಯ ಗ್ರೀಕ್ ಸಾಹಿತ್ಯದ ಕೃತಿಗಳನ್ನು ಸಹ ಅನುವಾದಿಸಿರುವ ಕಾರ್ಸನ್, ಉತ್ತರ ಅಮೆರಿಕದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ‘ಕ್ಲಾಸಿಕ್ಸ್’ (ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯ ಹಾಗೂ ಸಂಸ್ಕೃತಿ) ವಿಷಯವನ್ನು ಬೋಧಿಸಿದ್ದಾರೆ.