ಸತತ 3ನೇ ದಿನವಾದ ಶನಿವಾರ ಕೂಡ ಏರ್‌ಪೋರ್ಟ್ ದುರ್ಘಟನೆಯೊಂದು ಸಂಭವಿಸಿದೆ. ಭಾರೀ ಮಳೆಯ ನಡುವೆ ಗುಜರಾತ್‌ನ ರಾಜಕೋಟ್‌ ವಿಮಾನ ನಿಲ್ದಾಣದ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಕೆನೋಪಿ ಮೇಲ್ಛಾವಣಿ ಕುಸಿದುಬಿದ್ದಿದೆ.

ರಾಜಕೋಟ್‌: ಸತತ 3ನೇ ದಿನವಾದ ಶನಿವಾರ ಕೂಡ ಏರ್‌ಪೋರ್ಟ್ ದುರ್ಘಟನೆಯೊಂದು ಸಂಭವಿಸಿದೆ. ಭಾರೀ ಮಳೆಯ ನಡುವೆ ಗುಜರಾತ್‌ನ ರಾಜಕೋಟ್‌ ವಿಮಾನ ನಿಲ್ದಾಣದ ಹೊರಗಿನ ಪ್ರಯಾಣಿಕರ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಕೆನೋಪಿ ಮೇಲ್ಛಾವಣಿ ಕುಸಿದುಬಿದ್ದಿದೆ.ಮಧ್ಯಪ್ರದೇಶದ ಜಬಲ್ಪುರ ಏರ್‌ಪೋರ್ಟ್ ಮೇಲ್ಛಾವಣಿ ಹಾಗೂ ನವದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿ ನಂತರದ 3ನೇ ಘಟನೆ ಇದಾಗಿದೆ. ಈ ಎರಡೂ ಘಟನೆಗಳು ಗುರುವಾರ ಹಾಗೂ ಶುಕ್ರವಾರ ಸಂಭವಿಸಿದ್ದವು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾವುದೇ ಗಾಯಗಳು ಅಥವಾ ಸಾವುನೋವುಗಳ ವರದಿಯಾಗಿಲ್ಲ. ಘಟನೆಯ ಬೆನ್ನಲ್ಲೇ ಕೆನೋಪಿ ಮೇಲ್ಛಾವಣಿಯನ್ನು ದುರಸ್ತಿ ಮಾಡಲಾಗುತ್ತಿದೆ. ಅಲ್ಲದೆ, ಘಟನೆಯ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಏತನ್ಮಧ್ಯೆ, ನೈಋತ್ಯ ಮಾನ್ಸೂನ್ ಗುಜರಾತ್‌ನಲ್ಲಿ ಮತ್ತಷ್ಟು ಮುನ್ನಡೆಯುತ್ತಿದ್ದಂತೆ ಗುಜರಾತ್‌ನಲ್ಲಿ ಭಾರಿ ಮಳೆಯಾಗುತ್ತಿದೆ.