ತಿರುಮಲ ಬಾಲಾಜಿ ದೇಗುಲದ ಮುಖ್ಯ ಅರ್ಚಕರ ವಿರುದ್ಧ ಕೇಸ್‌

| Published : Feb 26 2024, 01:36 AM IST

ತಿರುಮಲ ಬಾಲಾಜಿ ದೇಗುಲದ ಮುಖ್ಯ ಅರ್ಚಕರ ವಿರುದ್ಧ ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಟಿಟಿಡಿ ಅಧಿಕಾರಿ, ಅಹೋಬಿಲ ಮಠಾಧೀಶರ ವಿರುದ್ಧ ಪೋಸ್ಟ್‌ ಹಾಕಿದ್ದಾರೆ, ಶ್ರೀಶೈಲಂ ಗುಹೆಯಿಂದ ನಿಧಿ ತೆಗೆಯಲು ಯತ್ನಿಸಿದ ಆರೋಪ ಹೊರಿಸಿ ತಿರುಪತಿ ತಿಮ್ಮಪ್ಪನ ಮುಖ್ಯ ಅರ್ಚಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ದೇವಸ್ಥಾನದ ಟ್ರಸ್ಟ್‌ನ ಅಧಿಕಾರಿ ಹಾಗೂ ಶ್ರೀಶೈಲದ ಅಹೋಬಿಲ ಮಠಾಧಿಪತಿಯ ವಿರುದ್ಧ ಆಕ್ಷೇಪಾರ್ಹ ವಿಡಿಯೋ ಪೋಸ್ಟ್‌ ಮಾಡಿದ ಆರೋಪದ ಸಂಬಂಧ ತಿರುಮಲ ದೇವಸ್ಥಾನದ ಮುಖ್ಯ ಗೌರವ ಅರ್ಚಕ ಎ.ವಿ.ರಮಣ ದೀಕ್ಷಿತುಲು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಟಿಟಿಡಿ ಅಧಿಕಾರಿ ಎ.ವಿ.ಧರ್ಮರೆಡ್ಡಿ ಹಾಗೂ ಶ್ರೀಶೈಲದ ಅಹೋಬಿಲ ಮಠಾಧೀಶರು ಶ್ರೀಶೈಲದ ಗುಹೆಯೊಂದರಿಂದ ನಿಧಿ ತೆಗೆಯಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ರಮಣ ದೀಕ್ಷಿತುಲು ವಿಡಿಯೋ ಪೋಸ್ಟ್‌ ಮಾಡಿದ್ದರು. ಅದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಅಹೋಬಿಲ ಮಠದ ಮುಖ್ಯಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಮಣ ದೀಕ್ಷಿತುಲು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.ಈ ನಡುವೆ, ವಿಡಿಯೋದಲ್ಲಿ ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಅಹೋಬಿಲ ಮಠ, ‘ರಮಣ ದೀಕ್ಷಿತುಲು ಅವರು ತಿರುಮಲ ದೇವಸ್ಥಾನದ ಅರ್ಚಕ ಹುದ್ದೆಯಲ್ಲಿ ಮುಂದುವರೆಯಲು ಯೋಗ್ಯರಲ್ಲ. ಅವರನ್ನು ವಜಾಗೊಳಿಸಬೇಕು. ಟಿಟಿಡಿಯ ಧರ್ಮರೆಡ್ಡಿ ಆಗಾಗ ಅಹೋಬಿಲಕ್ಕೆ ಬಂದು ನಿಧಿ ತೆಗೆಯಲು ಹೊಂಚು ಹಾಕುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ. ಆದರೆ ಧರ್ಮರೆಡ್ಡಿ ಕಳೆದ ಐದು ವರ್ಷದಲ್ಲಿ ಒಮ್ಮೆಯೂ ಅಹೋಬಿಲ ಮಠಕ್ಕೆ ಬಂದೇ ಇಲ್ಲ’ ಎಂದು ಹೇಳಿದೆ.