ಸರಿಯಾದ ಐಟಿ ಮಾಹಿತಿ ನೀಡದವರಿಗೆ ಸಿಬಿಡಿಟಿ ಇ ಮೇಲ್‌, ಎಸ್‌ಎಂಎಸ್‌

| Published : Mar 11 2024, 01:18 AM IST

ಸರಿಯಾದ ಐಟಿ ಮಾಹಿತಿ ನೀಡದವರಿಗೆ ಸಿಬಿಡಿಟಿ ಇ ಮೇಲ್‌, ಎಸ್‌ಎಂಎಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರಿಯಾದ ಐಟಿ ಮಾಹಿತಿ ನೀಡದವರಿಗೆ ಸಿಬಿಡಿಟಿಯಿಂದ ಇ ಮೇಲ್‌, ಎಸ್‌ಎಂಎಸ್‌ ಮೂಲಕ ಎಚ್ಚರಿಕೆ ರವಾನಿಸಲಾಗುತ್ತದೆ.

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಹಣಕಾಸು ವಹಿವಾಟಿಗೂ, ತೆರಿಗೆ ಪಾವತಿಗೂ ವ್ಯತ್ಯಾಸ ಕಂಡುಬಂದ ವ್ಯಕ್ತಿಗಳಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾ.15ರೊಳಗೆ ವ್ಯತ್ಯಾಸದ ಮೊತ್ತ ಪಾವತಿಸುವಂತೆ ಸೂಚಿಸಿ ಇ ಮೇಲ್‌, ಎಸ್‌ಎಂಎಸ್‌ ಮೂಲಕ ಮಾಹಿತಿ ರವಾನಿಸುವ ಕೆಲಸ ಆರಂಭಿಸಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ, ‘2023-24ನೇ ಸಾಲಿನಲ್ಲಿ ಕೆಲ ವ್ಯಕ್ತಿಗಳು/ಸಂಸ್ಥೆಗಳು ನಡೆಸಿದ ಹಣಕಾಸಿನ ವಹಿವಾಟಿಗೂ ಅವರು ತೆರಿಗೆ ಇಲಾಖೆಗೆ ಸಲ್ಲಿಸಿರುವ ಮಾಹಿತಿಗೂ ವ್ಯತ್ಯಾಸ ಇರುವುದು ಕಂಡುಬಂದಿದೆ. ಹೀಗಾಗಿ ಇಂಥ ಪ್ರಕರಣದಲ್ಲಿ ಬಾಕಿ ತೆರಿಗೆಯನ್ನು ಮಾ.15ರೊಳಗೆ ಪಾವತಿಸುವಂತೆ ಅವರಿಗೆ ಸೂಚಿಸಲಾಗುತ್ತಿದೆ’ ಎಂದು ಹೇಳಿದೆ.