ರಾಜಾ ಅವರನ್ನು 2ಜಿ ಹಗರಣದಲ್ಲಿ ಖುಲಾಸೆ ಮಾಡಬೇಕೆಂದು ಪ್ರಶ್ನಿಸಿ ಸಲ್ಲಿಸಿದ್ದ ಸಿಬಿಐ ಅರ್ಜಿಗೆ ಹೈಕೋರ್ಟ್‌ ಅಸ್ತು ಎಂದಿದೆ.

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಮಾಜಿ ಸಚಿವ ಎ. ರಾಜಾ ಖುಲಾಸೆಯಾಗಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಗೆ ದೆಹಲಿ ಹೈಕೋರ್ಟ್‌ ಅಸ್ತು ನೀಡಿದೆ.

ರಾಜಾ ಯುಪಿಎ ಸರ್ಕಾರದ ಅವಧಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು. 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದಲ್ಲಿ 2017ರ ಡಿಸೆಂಬರ್‌ನಲ್ಲಿ ರಾಜಾ ಸೇರಿದಂತೆ, ಡಿಎಂಕೆ ಸಂಸದೆ ಕನಿಮೋಳಿ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ 2018ರಲ್ಲಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಶುಕ್ರವಾರ ಈ ಅರ್ಜಿ ವಿಚಾರಣೆಗೆ ತೆಗೆದುಕೊಂಡ ನ್ಯಾ। ದಿನೇಶ್‌ ಕುಮಾರ್‌ ಶರ್ಮ ಮೇ ತಿಂಗಳಿನಲ್ಲಿ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.ಏನಿದು ‘ಲೀವ್‌ ಟು ಅಪೀಲ್‌’?

ಇದನ್ನು ‘ಲೀವ್‌ ಟು ಅಪೀಲ್‌’ ಅಡಿಯಲ್ಲಿ ಅನುಮತಿ ನೀಡಲಾಗಿದೆ. ಲೀವ್‌ ಟು ಅಪೀಲ್‌ ಎಂಬುದು ಸ್ಥಳೀಯ ನ್ಯಾಯಾಲಯಗಳ ನಿರ್ಧಾರವನ್ನು ಪ್ರಶ್ನಿಸುವುದಕ್ಕೆ ಮೇಲಿನ ನ್ಯಾಯಾಲಯಗಳು ಅಧಿಕೃತವಾಗಿ ನೀಡುವ ಅನುಮತಿಯಾಗಿದೆ.