ಇನ್ನೂ 1 ವರ್ಷ ಸಿಬಿಐಗೆ ಪ್ರವೀಣ್ ಸೂದ್ ಬಾಸ್‌

| N/A | Published : May 08 2025, 12:35 AM IST / Updated: May 08 2025, 04:30 AM IST

ಸಾರಾಂಶ

ಇದೇ ತಿಂಗಳ 25ರಂದು ಸಿಬಿಐನ ನಿರ್ದೇಶಕ ಪ್ರವೀಣ್ ಸೂದ್‌ ಅವರ ಅಧಿಕಾರ ಅಂತ್ಯ ಹಿನ್ನೆಲೆಯಲ್ಲಿ ಹೊಸ ನಿರ್ದೇಶಕರ ಆಯ್ಕೆಗಾಗಿ ನಡೆದ ಸಭೆಯಲ್ಲಿ ಸೂದ್‌ ಅವರನ್ನೇ ಒಂದು ವರ್ಷ ಅವಧಿಗೆ ಮುಂದುವರೆಸಲು ಸಮಿತಿ ನಿರ್ಧರಿಸಿದೆ.

ನವದೆಹಲಿ: ಇದೇ ತಿಂಗಳ 25ರಂದು ಸಿಬಿಐನ ನಿರ್ದೇಶಕ ಪ್ರವೀಣ್ ಸೂದ್‌ ಅವರ ಅಧಿಕಾರ ಅಂತ್ಯ ಹಿನ್ನೆಲೆಯಲ್ಲಿ ಹೊಸ ನಿರ್ದೇಶಕರ ಆಯ್ಕೆಗಾಗಿ ನಡೆದ ಸಭೆಯಲ್ಲಿ ಸೂದ್‌ ಅವರನ್ನೇ ಒಂದು ವರ್ಷ ಅವಧಿಗೆ ಮುಂದುವರೆಸಲು ಸಮಿತಿ ನಿರ್ಧರಿಸಿದೆ.

ಪ್ರವೀಣ್ ಸೂದ್‌ 2023ರ ಮೇ.25ರಂದು ಎರಡು ವರ್ಷಗಳ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು, ಅವರ ಎರಡು ವರ್ಷಗಳ ಅಧಿಕಾರವಧಿ ಇದೇ ತಿಂಗಳ 25ಕ್ಕೆ ಅಂತ್ಯ ಹಿನ್ನೆಲೆಯಲ್ಲಿ, ಹೊಸ ನಿರ್ದೇಶಕರ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ, ಸಿಜೆಐ ಸಂಜೀವ್ ಖನ್ನಾ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸೋಮವಾರ ಸಭೆ ನಡೆಸಿತ್ತು. 

ಸಭೆಯಲ್ಲಿ ಅವರ ಅಧಿಕಾರವಧಿಯನ್ನು ಒಂದು ವರ್ಷ ವಿಸ್ತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಕ್ಯಾಬಿನೆಟ್‌ ನೇಮಕಾತಿ ಸಮಿತಿ(ಎಸಿಸಿ) ಸೂದ್‌ ಸೇವಾ ಅವಧಿ ವಿಸ್ತರಿಸಿದೆ. 1986ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅವರು ಸಿಬಿಐ ನಿರ್ದೇಶಕರಾಗುವುದಕ್ಕೂ ಮುನ್ನ ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕರಾಗಿ (ಡಿಜಿಪಿ)ಕೆಲಸ ಮಾಡುತ್ತಿದ್ದರು.