ದಿ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿದ್ದ ಕನ್ನಡತಿ ದಿಶಾ ಸಾಲಿಯಾನ್ ನಿಗೂಢ ಸಾವಿಗೆ ಸಂಬಂಧಿಸಿ ಸಿಬಿಐ ಕಡೆಗೂ ಎಫ್‌ಐಆರ್ ದಾಖಲಿಸಿದೆ. ಘಟನೆ ನಡೆದು 6 ವರ್ಷವಾದರೂ ಇನ್ನೂ ಎಫ್‌ಐಆರ್ ದಾಖಲಿಸಲು ವಿಫಲವಾಗಿದ್ದಕ್ಕೆ ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸಿಬಿಐ ಎಫ್‌ಐಆರ್ ದಾಖಲಿಸಿದೆ.
- ಉದ್ಧವ್, ಆದಿತ್ಯ ಠಾಕ್ರೆ, ದಿನೋ ಮೋರಿಯಾಗೆ ಸಂಕಷ್ಟ
ನವದೆಹಲಿ: ದಿ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿದ್ದ ಕನ್ನಡತಿ ದಿಶಾ ಸಾಲಿಯಾನ್ ನಿಗೂಢ ಸಾವಿಗೆ ಸಂಬಂಧಿಸಿ ಸಿಬಿಐ ಕಡೆಗೂ ಎಫ್‌ಐಆರ್ ದಾಖಲಿಸಿದೆ. ಘಟನೆ ನಡೆದು 6 ವರ್ಷವಾದರೂ ಇನ್ನೂ ಎಫ್‌ಐಆರ್ ದಾಖಲಿಸಲು ವಿಫಲವಾಗಿದ್ದಕ್ಕೆ ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸಿಬಿಐ ಎಫ್‌ಐಆರ್ ದಾಖಲಿಸಿದೆ.ಎಫ್‌ಐಆರ್‌ನಲ್ಲಿ ಯಾವುದೇ ಆರೋಪಿಗಳ ಹೆಸರು ಪ್ರಸ್ತಾಪಿಸದಿದ್ದರೂ ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ನೀಡಿದ ಹೇಳಿಕೆ ಆಧಾರದಲ್ಲಿ ಈ ಎಫ್‌ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸತೀಶ್ ಸಾಲಿಯಾನ್ ಅವರು ನೀಡಿದ ಹೇಳಿಕೆಯಲ್ಲಿ ಉದ್ದವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ, ನಟ ದಿನೋ ಮೋರಿಯಾ, ಆದಿತ್ಯ ಪಾಂಚೋಲಿ ಪುತ್ರ ಸೂರಜ್ ಪಾಂಚೋಲಿ, ಅನಿಲ್ ದೇಶ್‌ಮುಖ್, ಉದ್ದವ್ ಠಾಕ್ರೆ ಮತ್ತು ನಟಿ ರೇಹಾ ಚಕ್ರವರ್ತಿ ಸೇರಿ ಹಲವರ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಗೆ ಸಿಬಿಐ ತನಿಖೆಯ ಬಿಸಿ ತಟ್ಟುವ ಸಾಧ್ಯತೆ ಇದೆ.
ಎಫ್‌ಐಆರ್‌ನಲ್ಲಿ ಕ್ರಿಮಿನಲ್ ಷಡ್ಯಂತ್ರ, ಗ್ಯಾಂಗ್ ರೇಪ್, ಹತ್ಯೆ, ಸಾಕ್ಷ್ಯ ನಾಶ ಮತ್ತು ಸರ್ಕಾರಿ ಅಧಿಕಾರಿಗಳು ಅಪರಾಧಿಗಳನ್ನು ರಕ್ಷಿಸಲು ತಪ್ಪು ದಾಖಲೆ ನೀಡಿದ ಆರೋಪದ ಕುರಿತು ಉಲ್ಲೇಖಿಸಲಾಗಿದೆ.ಜಾಹೀರಾತು ಶೂಟಿಂಗ್‌ಗಾಗಿ ದಿಶಾ ಸಾಲಿಯಾನ್ ಮನೆ ಜೂ.4, 2020ರಂದು ಮನೆಯಿಂದ ಹೋಗಿದ್ದಳು. 6 ಗಂಟೆಯ ವರೆಗೆ ಆಕೆ ಕರೆ ಮಾಡುತ್ತಾ ಕುಟುಂಬದವರ ಜತೆಗೆ ಸಂಪರ್ಕದಲ್ಲಿದ್ದಳು. ಜೂ.7ರಂದು ಆಕೆಯ ಮೊಬೈಲ್ ಫೋನ್‌ನಲ್ಲಿ ಮದುವೆ ನಿಶ್ಚಯವಾಗಿದ್ದ ಹುಡುಗ ಮಾತನಾಡಿದ್ದ. ಜೂ.9ರಂದು ಮುಂಬೈನ ವಸತಿಗೃಹವೊಂದರ 14ನೇ ಮಾಳಿಗೆಯಿಂದ ಬಿದ್ದು ಆಕೆ ಸಾವಿಗೀಡಾಗಿದ್ದಳು.ದಿಶಾ ಸಾಲಿಯಾನ್ ಜೂ.8ರಂದು ಸಾವಿಗೀಡಾಗಿದ್ದರೆ, ಇದಾಗಿ ಒಂದು ವಾರದ ಬಳಿಕ ಜೂ.14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾಗಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು.