ಸಾರಾಂಶ
ಅಶ್ಲೀಲ ಅಂಶಗಳನ್ನು ಒಳಗೊಂಡಿದ್ದ ಗೂಗಲ್ ಪ್ಲೇಸ್ಟೋರ್‌ನ 7, ಆ್ಯಪಲ್ ಸ್ಟೋರ್‌ನ 3, ಒಟಿಟಿ ಪ್ಲಾಟ್‌ಫಾರ್ಮ್‌ನಿಂದ 18, ವೆಬ್‌ಸೈಟ್‌ನಿಂದ 19 ಮತ್ತು ಸಾಮಾಜಿಕ ಜಾಲತಾಣದ 57 ಖಾತೆಗಳನ್ನು ಸರ್ಕಾರ ನಿಷೇಧಿಸಿದೆ.
ನವದೆಹಲಿ: ಅಶ್ಲೀಲ ಅಂಶವಿರುವ 18 ಒಟಿಟಿ ಪ್ಲಾಟ್‌ಫಾರ್ಮ್, 19 ವೆಬ್‌ಸೈಟ್, 10 ಆ್ಯಪ್ ಮತ್ತು ಅವುಗಳಿಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ 7, ಆ್ಯಪಲ್ ಸ್ಟೋರ್‌ನಲ್ಲಿ 3 ಸೇರಿ ಹತ್ತು ಆ್ಯಪ್‌ಗಳಿವೆ ಮತ್ತು ಅವುಗಳಿಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.‘ಸೃಜನಶೀಲ ಅಭಿವ್ಯಕ್ತಿ ನೆಪದಲ್ಲಿ ಅಶ್ಲೀಲತೆ, ಅಸಭ್ಯತೆ ಸಲ್ಲದು. ಮಾಧ್ಯಮ ಮತ್ತು ಮನರಂಜನೆ, ಮಕ್ಕಳ ಹಕ್ಕುಗಳಲ್ಲಿ ಪರಿಣತಿ ಹೊಂದಿರುವ ತಜ್ಞರೊಂದಿಗೆ ಸಮಾಲೋಚಿಸಿ ಮಾಹಿತಿ ತಂತ್ರಜ್ಞಾನ ಕಾಯಿದೆ-2000ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.