ಸಾರಾಂಶ
ಕೇಂದ್ರ ಸರ್ಕಾರಿ ಸಚಿವಾಲಯದ ಉನ್ನತ ಹುದ್ದೆಗಳಿಗೆ ಶೀಘ್ರದಲ್ಲೇ ಖಾಸಗಿ ಸಂಸ್ಥೆಗಳ ತಜ್ಞರನ್ನು ನೇಮಕ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.
ನವದಹೆಲಿ: ಆಡಳಿತ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಖಾಸಗಿ ವಲಯದ ಪರಿಣತರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಇದರ ಭಾಗವಾಗಿ ಶೀಘ್ರದಲ್ಲಿ 25 ಜನರನ್ನು ನೇಮಿಸಿಕೊಳ್ಳಲಿದೆ. ಇವರು ವಿವಿಧ ಇಲಾಖೆಗಳ ನಿರ್ದೇಶಕರು, ಹೆಚ್ಚುವರಿ ಕಾರ್ಯದರ್ಶಿಗಳ ಸ್ಥಾನದಲ್ಲಿ ಕೆಲಸ ಮಾಡಲಿದ್ದಾರೆ.
ಇವರ ನೇಮಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟ ನೇಮಕ ಸಮಿತಿ (ಎಸಿಸಿ) ಅನುಮೋದನೆ ನೀಡಿದ್ದು, ಮೂವರು ಜಂಟಿ ಕಾರ್ಯದರ್ಶಿ, 22 ನಿರ್ದೇಶಕರು ಹಾಗೂ ಉಪ ನಿರ್ದೇಶಕರ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರನ್ನು ನೇಮಕ ಮಾಡಲಾಗುತ್ತದೆ.
2018ರಲ್ಲಿ ಜಾರಿಯಾದ ಈ ನೇಮಕ ಪ್ರಕ್ರಿಯೆಯಲ್ಲಿ ಈಗಾಗಲೇ 38 ಪರಿಣತರು ನೇಮಕವಾಗಿದ್ದು, ಅದರಲ್ಲಿ 33 ಮಂದಿ ಇನ್ನು ಕಾರ್ಯನಿರ್ವಹಿಸುತ್ತಿದ್ದಾರೆ.