ಲೋಕಸಭಾ ಚುನಾವಣೆಗಳ ನಡುವೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಬ್ಬಂದಿ ಸಚಿವಾಲಯ ಭರ್ಜರಿ ಸಿಹಿಸುದ್ದಿ ನೀಡಿದೆ.

ನವದೆಹಲಿ: ಲೋಕಸಭಾ ಚುನಾವಣೆಗಳ ನಡುವೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಬ್ಬಂದಿ ಸಚಿವಾಲಯ ಭರ್ಜರಿ ಸಿಹಿಸುದ್ದಿ ನೀಡಿದೆ. 2024ರ ಜ.1ರಿಂದಲೇ ಅನ್ವಯವಾಗುವಂತೆ ಹಲವು ಭತ್ಯೆ ಮತ್ತು ಸಬ್ಸಿಡಿ ಏರಿಕೆ ಮಾಡಿರುವುದಾಗಿ ಅದು ಪ್ರಕಟಿಸಿದೆ.

ತುಟ್ಟಿ ಭತ್ಯೆ ಶೇ.50ರಷ್ಟು ಏರಿಕೆಯಾದಾಗ ಸಹಜವಾಗಿಯೇ ಭತ್ಯೆ ಮತ್ತು ಸಬ್ಸಿಡಿ ಶೇ.25ರಷ್ಟು ಹೆಚ್ಚಳ ಆಗಬೇಕೆಂಬ ನಿಯಮ ಇದೆ. ಅದರಂತೆ ಮಕ್ಕಳ ಶಿಕ್ಷಣ ಭತ್ಯೆ 2812 ರು.ಗೆ ಮತ್ತು ಹಾಸ್ಟೆಲ್‌ ಸಬ್ಸಿಡಿ ಮೊತ್ತವನ್ನು ಮಾಸಿಕ 8437 ರು.ಗೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಜೊತೆಗೆ ಅಂಗವಿಕಲ ಮಹಿಳಾ ನೌಕರರಿಗೆ ಅನ್ವಯವಾಗುವ ಶಿಶುಪಾಲನಾ ಭತ್ಯೆಯನ್ನು ತಿಂಗಳಿಗೆ ₹3,750ಕ್ಕೆ ಏರಿಕೆ ಮಾಡಲಾಗಿದೆ. ಜೊತೆಗೆ ನೌಕರರಿಗೆ ಅಂಗವಿಕಲ ಮಕ್ಕಳಿದ್ದಲ್ಲಿ ನೀಡಲಾಗುವ ಭತ್ಯೆಯನ್ನು ದುಪ್ಪಟ್ಟು ಮಾಡಲಾಗಿದ್ದು, ತಿಂಗಳಿಗೆ ₹5,625ಕ್ಕೆ ಏರಿಕೆ ಮಾಡಲಾಗಿದೆ.