ಚಂದ್ರಯಾನ-4ರಲ್ಲಿ ಚಂದ್ರನ ಮಣ್ಣು ಸಂಗ್ರಹ: ಇಸ್ರೋ

| Published : Jun 27 2024, 01:01 AM IST / Updated: Jun 27 2024, 05:00 AM IST

ಸಾರಾಂಶ

‘ಇಸ್ರೋ ಅಭಿವೃದ್ಧಿ ಪಡಿಸುತ್ತಿರುವ ಚಂದ್ರಯಾನ - 4 ನೌಕೆ ಚಂದ್ರನ ಅಂಗಳದಿಂದ ಕಲ್ಲು ಮಣ್ಣು ಹೊತ್ತು ಭೂಮಿಗೆ ಬರಲಿದೆ’ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.

ನವದೆಹಲಿ: ‘ಇಸ್ರೋ ಅಭಿವೃದ್ಧಿ ಪಡಿಸುತ್ತಿರುವ ಚಂದ್ರಯಾನ - 4 ನೌಕೆ ಚಂದ್ರನ ಅಂಗಳದಿಂದ ಕಲ್ಲು ಮಣ್ಣು ಹೊತ್ತು ಭೂಮಿಗೆ ಬರಲಿದೆ’ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ. ಜೊತೆಗೆ ಇದಕ್ಕಾಗಿ ಬಾಹ್ಯಾಕಾಶ ನಿಲ್ದಾಣ ವ್ಯವಸ್ಥೆ (ಸ್ಪೇಸ್‌ ಡಾಕಿಂಗ್‌ ಎಕ್ಸ್‌ಪಿರಿಯನ್ಸ್‌)ಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ದೆಹಲಿಯಲ್ಲಿ ನಡೆದ ಇಂಡಿಯನ್‌ ಸ್ಪೇಸ್‌ ಕಾಂಗ್ರೆಸ್‌ನಲ್ಲಿ ಮಾತನಾಡಿದ ಅವರು,‘ಚಂದ್ರನಿಂದ ನೇರವಾಗಿ ಕಲ್ಲು ಮಣ್ಣು ಹೊತ್ತು ಭೂಮಿಗೆ ತರುವ ಸಾಮರ್ಥ್ಯ ಇರುವ ರಾಕೆಟ್‌ ಸದ್ಯಕ್ಕೆ ಇಸ್ರೋ ಬಳಿ ಇಲ್ಲ. 

ಇದಕ್ಕಾಗಿ ಭೂಮಿ ಹಾಗೂ ಚಂದ್ರನ ಅಂತರಿಕ್ಷದಲ್ಲಿ ಬಾಹ್ಯಾಕಾಶ ನಿಲ್ದಾಣ ವ್ಯವಸ್ಥೆ (ಸ್ಪೇಸ್‌ ಡಾಕಿಂಗ್‌ ಎಕ್ಸ್‌ಪಿರಿಯನ್ಸ್‌) ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ನಿಲ್ದಾಣವು ರಾಕೆಟ್‌ಗೆ ಎರಡು ಬಾರಿ ಲಾಂಚ್‌ ಆಗಲು ಅವಕಾಶ ಮಾಡಿಕೊಡುತ್ತದೆ ಈ ವ್ಯವಸ್ಥೆಯನ್ನು ನವೆಂಬರ್‌ ಅಥವ ಡಿಸೆಂಬರ್‌ನಲ್ಲಿ ನೆರವೇರಿಸಲು ಯೋಜಿಸಲಾಗುತ್ತಿದೆ’ ಎಂದು ಹೇಳಿದರು.