ಪೂಂಛ್‌ ದಾಳಿ ಬಿಜೆಪಿ ಸ್ಟಂಟ್‌ ಎಂಬುದಾಗಿ ಪಂಜಾಬ್‌ ಮಾಜಿ ಸಿಎಂ ಚನ್ನಿ ವಿವಾದ ಸೃಷ್ಟಿಸಿದ್ದು, ಚುನಾವಣೆ ವೇಳೆ ಜನರ ಜೀವದ ಜತೆ ಬಿಜೆಪಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.

ನವದೆಹಲಿ: ಕಾಶ್ಮೀರದ ಪೂಂಛ್‌ ಪ್ರದೇಶದಲ್ಲಿ ಭಾರತೀಯ ವಾಯುಸೇನಾ ಯೋಧರ ಮೇಲೆ ನಡೆದ ಉಗ್ರರ ದಾಳಿ ಬಗ್ಗೆ ಪಂಜಾಬ್‌ ಮಾಜಿ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇದು ಚುನಾವಣಾ ನಿಮಿತ್ತ ಬಿಜೆಪಿಯಿಂದ ಮಾಡಿಸಲಾದ ಪೂರ್ವ ನಿಯೋಜಿತ ಸ್ಟಂಟ್‌ ಆಗಿದೆ ಎಂದು ಆರೋಪಿಸಿದ್ದಾರೆ.

ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಪ್ರತಿಬಾರಿ ಚುನಾವಣೆ ಬಂದಾಗಲೂ ಈ ರೀತಿ ಪೂರ್ವ ನಿಯೋಜಿತ ದಾಳಿ ನಡೆಸಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತದೆ. ಅದರಂತೆ ಶನಿವಾರ ನಡೆದ ಪೂಂಛ್‌ ದಾಳಿಯೂ ಬಿಜೆಪಿ ಮಾಡಿಸಿರುವ ಸ್ಟಂಟ್‌ ಆಗಿದ್ದು, ಅದನ್ನು ಉಗ್ರಕೃತ್ಯವೆಂದು ಬಿಂಬಿಸಲಾಗುತ್ತಿರುವುದು ಶುದ್ಧ ಸುಳ್ಳು’ ಎಂದು ವಾಗ್ದಾಳಿ ನಡೆಸಿದರು.

ಶನಿವಾರ ಪೂಂಛ್‌ ಪ್ರದೇಶದಲ್ಲಿ ಭಾರತೀಯ ವಾಯುಸೇನಯ ಯೋಧರೊಬ್ಬರನ್ನು ಉಗ್ರರು ಅಮಾನುಷವಾಗಿ ದಾಳಿ ಮಾಡಿ ಹತ್ಯೆ ಮಾಡಿ ನಾಲ್ಬರು ಯೋಧರನ್ನು ಗಾಯಗೊಳಿಸಿದ್ದರು. ದುಷ್ಕರ್ಮಿಗಳಿಗಾಗಿ ಶೋಧ ಮುಂದುವರೆದಿದೆ.