ಸಾರಾಂಶ
ವಿಶ್ವಪ್ರಸಿದ್ಧ ಒಡಿಶಾದ ಪುರಿಯ ಜಗನ್ನಾಥ ದೇವಸ್ಥಾನದ ರಥೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಪುರಿ: ವಿಶ್ವಪ್ರಸಿದ್ಧ ಒಡಿಶಾದ ಪುರಿಯ ಜಗನ್ನಾಥ ದೇವಸ್ಥಾನದ ರಥೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು. 12ನೇ ಶತಮಾನದ ಬೃಹತ್ ರಥವನ್ನು 2.5 ಕಿ.ಮೀ ದೂರದ ಗುಂಡಿಚಾ ದೇವಸ್ಥಾನದ ಕಡೆ ಎಳೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಪರಿಕ್ರಮವನ್ನು ನೆರವೇರಿಸಿದ್ದು, ಒಡಿಸ್ಸಾದ ರಾಜ್ಯಪಾಲ ರಘುಬರ್ ದಾಸ್, ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಹಾಗೂ ಕೇಂದ್ರ ಮಂತ್ರಿ ಧರ್ಮೇಂದ್ರ ಪ್ರಧಾನ್ ರಥಕ್ಕೆ ಕಟ್ಟಿದ್ದ ಹಗ್ಗವನ್ನು ಎಳೆಯುವ ಮೂಲಕ ಸಾಂಕೇತಿಕವಾಗಿ ಉತ್ಸವಕ್ಕೆ ಚಾಲನೆ ನೀಡಿದರು. ವಿಪಕ್ಷ ನಾಯಕ ನವೀನ್ ಪಟ್ನಾಯಕ್ ಕೂಡಾ ಹಾಜರಿದ್ದರು.
ವಾದ್ಯಗಳು ಹಾಗೂ ಮಂತ್ರಘೋಷಗಳೊಂದಿಗೆ ಬಾಲಭದ್ರ, ಸುಭದ್ರಾ ದೇವಿ ಹಾಗೂ ಜಗನ್ನಾಥರ 45 ಅಡಿ ಎತ್ತರದ ರಥವನ್ನು ಸಾವಿರಾರು ಭಕ್ತರು ಜೈ ಜಗನ್ನಾಥ್ ಹಾಗೂ ಹರಿ ಬೋಲ್ ಎಂಬ ಘೋಷಣೆಗಳೊಂದಿಗೆ ಎಳೆದರು. ಯಾತ್ರೆಗೂ ಮುನ್ನ ಒಡಿಸ್ಸಿ ನೃತ್ಯ ಹಾಗೂ ಕೀರ್ತನೆ ನೆರವೇರಿಸಲಾಯಿತು.
ರಥಯಾತ್ರೆ ವೇಳೆ ಕಾಲ್ತುಳಿದ ಘಟನೆ ನಡೆದಿದ್ದು ಹಲವರು ಗಾಯಗೊಂಡರು.