ಸಾರಾಂಶ
ಬೀಜಿಂಗ್: ಚೀನಾದ ಕಲಾವಿದೆಯೊಬ್ಬಳು ಭಾರತೀಯ ನೃತ್ಯವಾದ ಭರತನಾಟ್ಯದ ಅರಂಗೇಟ್ರಂ ಪ್ರದರ್ಶಿಸಿ ದಾಖಲೆ ಸೃಷ್ಟಿಸಿದ್ದಾರೆ.
ಲಿಯು ಮುಜಿ (13) ಎಂಬಾಕೆ ಖ್ಯಾತ ಭರತನಾಟ್ಯ ಕಲಾವಿದೆ ಲೇಲಾ ಸ್ಯಾಮ್‌ಸನ್, ಭಾರತೀಯ ರಾಜತಾಂತ್ರಿಕರು ಹಾಗೂ ಚೀನೀ ಪ್ರೇಕ್ಷಕರ ಸಮ್ಮುಖದಲ್ಲಿ ತನ್ನ ಮೊದಲ ನೃತ್ಯ ಪ್ರದರ್ಶನ ನೀಡಿದ್ದಾರೆ.
‘ಚೀನೀ ಶಿಕ್ಷಕರಿಂದ ಭರತನಾಟ್ಯಂ ಕಲಿತು ಅರಂಗೇಟ್ರಂ ಪ್ರದರ್ಶಿಸಿದವರಲ್ಲಿ ಲಿಯು ಮೊದಲಿಗರಾಗಿದ್ದಾರೆ’ ಎಂದು ಆಕೆಯ ಗುರು ಜಿನ್ ಶಾನ್ ಶಾನ್ ಹರ್ಷಿಸಿದ್ದಾರೆ.
ಅರಂಗೇಟ್ರಂ ಎಂಬುದು ಭರತನಾಟ್ಯಂ ಕಲಿತ ವಿದ್ಯಾರ್ಥಿ ತನ್ನ ಗುರು ಹಾಗೂ ಪರಿಣಿತರ ಎದುರಲ್ಲಿ ನಿಡುವ ತನ್ನ ಮೊದಲ ನೃತ್ಯ ಪ್ರದರ್ಶನವಾಗಿದೆ. ಇದಾದ ಬಳಿಕವೇ ಅವರು ಬೇರೆಡೆ ಪ್ರದರ್ಶನಗಳನ್ನು ನೀಡಲು ಅಥವಾ ಅನ್ಯರಿಗೆ ಕಲಿಸಲು ಅರ್ಹತೆ ಪಡೆಯುತ್ತಾರೆ.
==
ಹಳಿತಪ್ಪಿದ ರಾಣಿ ಕಮಲಾಪತಿ ರೈಲಿನ 2 ಬೋಗಿ: ಸಾವು, ನೋವಿಲ್ಲ
ಇಟಾರ್ಸಿ: ರಾಣಿ ಕಮಲಾಪತಿ- ಸಹರ್ಸಾ ಪ್ಯಾಸೆಂಜರ್ ರೈಲು ಹಳಿತಪ್ಪಿದ ಘಟನೆ ಸೋಮವಾರ ಸಂಜೆ ಮಧ್ಯಪ್ರದೇಶದ ಇಟಾರ್ಸಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಹಬ್ಬದ ವಿಶೇಷ ರೈಲು ಇಟಾರ್ಸಿ ರೈಲು ನಿಲ್ದಾಣ ಪ್ರವೇಶಿಸುವ ವೇಳೆ, ಏಕಾಏಕಿ ರೈಲಿನ ಬಿ1, ಬಿ2 ಎಸಿ ಕೋಚ್‌ಗಳು ಹಳಿ ತಪ್ಪಿವೆ. ಆದರೆ ಈ ವೇಳೆ ರೈಲಿನ ವೇಗ ಗಂಟೆಗೆ ಕೇವಲ 5 ಕಿ.ಮಿ ಇದ್ದ ಕಾರಣ ಯಾವುದೇ ದೊಡ್ಡಮಟ್ಟದ ಅವಘಡ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಧಾವಿಸಿದ್ದು, ಹಳಿ ತಪ್ಪಿದ ಬೋಗಿಗಳನ್ನು ಎತ್ತುವ ಮತ್ತು ಮಾರ್ಗವನ್ನು ಸಂಚಾರಕ್ಕೆ ಮುಕ್ತ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.
ಇಟಾರ್ಸಿ: ರಾಣಿ ಕಮಲಾಪತಿ- ಸಹರ್ಸಾ ಪ್ಯಾಸೆಂಜರ್ ರೈಲು ಹಳಿತಪ್ಪಿದ ಘಟನೆ ಸೋಮವಾರ ಸಂಜೆ ಮಧ್ಯಪ್ರದೇಶದ ಇಟಾರ್ಸಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಹಬ್ಬದ ವಿಶೇಷ ರೈಲು ಇಟಾರ್ಸಿ ರೈಲು ನಿಲ್ದಾಣ ಪ್ರವೇಶಿಸುವ ವೇಳೆ, ಏಕಾಏಕಿ ರೈಲಿನ ಬಿ1, ಬಿ2 ಎಸಿ ಕೋಚ್‌ಗಳು ಹಳಿ ತಪ್ಪಿವೆ. ಆದರೆ ಈ ವೇಳೆ ರೈಲಿನ ವೇಗ ಗಂಟೆಗೆ ಕೇವಲ 5 ಕಿ.ಮಿ ಇದ್ದ ಕಾರಣ ಯಾವುದೇ ದೊಡ್ಡಮಟ್ಟದ ಅವಘಡ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಧಾವಿಸಿದ್ದು, ಹಳಿ ತಪ್ಪಿದ ಬೋಗಿಗಳನ್ನು ಎತ್ತುವ ಮತ್ತು ಮಾರ್ಗವನ್ನು ಸಂಚಾರಕ್ಕೆ ಮುಕ್ತ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.
==
ಟೀವಿಯಲ್ಲಿ ದುರಂತದ ದೃಶ್ಯ ಪ್ರಸಾರ ವೇಳೆ ದಿನಾಂಕ, ಸಮಯ ಪ್ರದರ್ಶಸಿ: ಸರ್ಕಾರ
ನವದೆಹಲಿ: ಪ್ರಾಕೃತಿಕ ವಿಕೋಪಗಳು ಹಾಗೂ ಅವಘಡಗಳ ಸಂದರ್ಭದಲ್ಲಿ ದೃಶ್ಯಾವಳಿ ಪ್ರಸಾರದ ವೇಳೆ ಘಟನೆ ನಡೆದ ದಿನಾಂಕ ಮತ್ತು ಸಮಯವನ್ನು ಪ್ರದರ್ಶಿಸಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ದುರ್ಘಟನೆ ನಡೆದ ಹಲವು ದಿನಗಳ ಬಳಿಕವೂ ಅದೇ ದೃಶ್ಯಾವಳಿ ತೋರಿಸುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಸಮಸ್ಯೆ ತಡೆಯಲು ಎಲ್ಲಾ ಖಾಸಗಿ ವಾಹಿನಿಗಳು ದೃಶ್ಯಾವಳಿಗಳ ಮೇಲೆ ಘಟನೆ ನಡೆದ ದಿನಾಂಕ ಮತ್ತು ಸಮಯವನ್ನು ತೋರಿಸಬೇಕು ಎಂದಿದೆ.
ವಯನಾಡು ಹಾಗೂ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತವನ್ನು ಎಲ್ಲಾ ಸುದ್ದಿ ಸಂಸ್ಥೆಗಳು ಪ್ರಸಾರ ಮಾಡುತ್ತಿರುವ ಸಂದರ್ಭದಲ್ಲಿ ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
==
ಬಿಹಾರ ದೇಗುಲದಲ್ಲಿ ಕಾಲ್ತುಳಿತಕ್ಕೆ 7 ಭಕ್ತರು ಬಲಿ
ಜೆಹನಾಬಾದ್: ಬಿಹಾರದ ಬಾಬಾ ಸಿದ್ಧೇಶ್ವರ ನಾಥ ದೇಗುಲದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 6 ಮಹಿಳೆಯರು ಸೇರಿದಂತೆ 7 ಮಂದಿ ಭಕ್ತರು ಸಾವನ್ನಪ್ಪಿ, 16 ಮಂದಿ ಗಾಯಗೊಂಡಿದ್ದಾರೆ.ಶ್ರಾವಣ ಮಾಸದಲ್ಲಿ ನಡೆಯುವ ಕಾವಡ ಯಾತ್ರೆಯ ನಿಮಿತ್ತ ದೇವಸ್ಥಾನದಲ್ಲಿ ಜನ ದಟ್ಟಣೆ ಹೆಚ್ಚಾದ ಕಾರಣದಿಂದ ನೂಕುನುಗ್ಗಲು ಉಂಟಾಗಿ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಕಾಲ್ತುಳಿತ ಘಟನೆಗೆ ನೈಜ ಕಾರಣವೇನು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಯಾತ್ರಿಕರು ಮತ್ತು ಹೂವಿನ ವ್ಯಾಪಾರಿಗಳ ನಡುವೆ ವಾಗ್ವಾದ ನಡೆದಿರುವುದು ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆಈ ದುರಂತಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದು ಸಾವನ್ನಪ್ಪಿರುವವರ ಕುಟುಂಬಗಳಿಗೆ ತಲಾ 4 ಲಕ್ಷ ರು. ಪರಿಹಾರವನ್ನು ಘೋಷಿಸಿದ್ದಾರೆ.
==
ಆ.15ರಂದು ಕೇಜ್ರಿ ಬದಲು ಆತಿಶಿಯಿಂದ ಧ್ವಜಾರೋಹಣ: ಹೊಸ ವಿವಾದ
ನವದೆಹಲಿ: ‘ಆ15ರ ಸ್ವಾತಂತ್ರ್ಯ ದಿನದಂದು, ಜೈಲಲ್ಲಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಬದಲು ಸಚಿವೆ ಅತಿಶಿ ಅವರು ಧ್ವಜಾರೋಹಣ ಮಾಡಲಿದ್ದಾರೆ. ಈ ಬಗ್ಗೆ ಜೈಲಿಂದಲೇ ಕೇಜ್ರಿವಾಲ್ ನಮ್ಮ ಭೇಟಿ ವೇಳೆ ಸೂಚನೆ ನೀಡಿದ್ದಾರೆ’ ಎಂದು ಸಚಿವ ಗೋಪಾಲ್ ರಾಯ್ ಸೋಮವಾರ ಘೋಷಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ದಿಲ್ಲಿ ಉಪ ರಾಜ್ಯಪಾಲರ ಕಚೇರಿ, ‘ನಮಗೆ ಈ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ’ ಎಂದಿದೆ. ಇದು ಉಪ ರಾಜ್ಯಪಾಲ ವಿ.ಕೆ ಸಕ್ಸೇನಾ ಹಾಗೂ ಆಪ್ ನಡುವೆ ಹೊಸ ಜಟಾಪಟಿಗೆ ಕಾರಣವಾಗುವ ಸಾಧ್ಯತೆಯಿದೆ.
ಹೀಗೆ ಜೈಲಿನಿಂದಲೇ ಆದೇಶ ನೀಡುವುದು ನಿಯಮಬಾಹಿರ ಎಂದಿರುವ ತಿಹಾರ್ ಜೈಲಧಿಕಾರಿಗಳು, ಕೇಜ್ರಿವಾಲ್‌ಗೆ ನೀಡುತ್ತಿರುವ ಸವಲತ್ತು ಕಡಿತ ಮಾಡುವುದಾಗಿ ಎಚ್ಚರಿಸಿದ್ದಾರೆ.