ಇಡಿ ಅಧಿಕಾರಿಗಳ ಕೇಸು, ಶೇಖ್‌ ಹಸ್ತಾಂತರಕ್ಕೆ ಬಂಗಾಳ ಪೊಲೀಸರ ನಕಾರ

| Published : Mar 06 2024, 02:18 AM IST

ಇಡಿ ಅಧಿಕಾರಿಗಳ ಕೇಸು, ಶೇಖ್‌ ಹಸ್ತಾಂತರಕ್ಕೆ ಬಂಗಾಳ ಪೊಲೀಸರ ನಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಂದೇಶ್‌ಖಾಲಿಯಲ್ಲಿ ಅಧಿಕಾರಿಗಳಿಗೆ ಥಳಿತ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಮತ್ತು ಆರೋಪಿಯನ್ನು ಸಿಬಿಐಗೆ ಹಸ್ತಾಂತರಿಸಲು ನಿರಾಕರಿಸಿದೆ.

ಕೋಲ್ಕತಾ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲಿನ ಕೇಸು ಮತ್ತು ಕೇಸಿನ ಪ್ರಮುಖ ಆರೋಪಿ ಶಜಹಾನ್‌ನನ್ನು ಸಿಬಿಐಗೆ ಹಸ್ತಾಂತರಿಸುವಂತೆ ಕಲ್ಕತಾ ಹೈಕೋರ್ಟ್‌ ನೀಡಿದ್ದ ಆದೇಶ ಪಾಲನೆಗೆ ಬಂಗಾಳ ಸರ್ಕಾರ ನಿರಾಕರಿಸಿದೆ.

ಹೈಕೋರ್ಟ್‌ ಆದೇಶದ ಕುರಿತು ನಾವು ಸುಪ್ರೀಂಕೋರ್ಟ್‌ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಪ್ರಕರಣ ವರ್ಗಾಯಿಸುವುದಿಲ್ಲ ಎಂದು ಪೊಲೀಸರು ಪಟ್ಟು ಹಿಡಿದಿದ್ದಾರೆ.

ಹೀಗಾಗಿ ದಾಖಲೆ ಪಡೆಯಲು ಹೋಗಿದ್ದ ಸಿಬಿಐ ಅಧಿಕಾರಿಗಳು ಬರಿಗೈನಲ್ಲಿ ಮರಳಿ, ತಾವೇ ಪ್ರತ್ಯೇಕ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.