ಸಾರಾಂಶ
ನಟ ಚಿರಂಜೀವಿ, ನಟಿ ವೈಜಯಂತಿ ಬಾಲಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ನವದೆಹಲಿ: ನಟ ಚಿರಂಜೀವಿ, ನಟಿ ವೈಜಯಂತಿ ಬಾಲಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಸುಪ್ರೀಂಕೋರ್ಟ್‌ನ ಮೊದಲ ನ್ಯಾಯಾಧೀಶೆ ದಿವಂಗತ ಫಾತಿಮಾ ದೇವಿ, ‘ಬಾಂಬೆ ಸಮಾಚಾರ’ ಮುಖ್ಯಸ್ಥರಾದ ಹೊರ್ಮುಸ್ಜಿ ಎನ್ ಕಾಮಾ, ಬಿಜೆಪಿ ಹಿರಿಯ ನಾಯಕ ಓ ರಾಜಗೋಪಾಲ್, ತಮಿಳು ನಟ ದಿವಂಗತ ವಿಜಯಕಾಂತ್ ಸೇರಿದಂತೆ ವಿವಿಧ ರಂಗದ ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವರ್ಷದ ಗಣರಾಜ್ಯೋತ್ಸವ ದಿನದಿಂದ ಒಟ್ಟು 132 ಗಣ್ಯರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿತ್ತು. ಕಳೆದ ತಿಂಗಳ 22 ರಂದು ಹಲವು ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
)
;Resize=(128,128))
;Resize=(128,128))
;Resize=(128,128))