ಸಾರಾಂಶ
ಐಸಿಎಸ್ಇ ಬೋರ್ಡ್‌ನ 10 ಮತ್ತು 12 ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಕಳೆ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶದಲ್ಲಿ ಏರಿಕೆಯಾಗಿದೆ.
ನವದೆಹಲಿ: ಐಸಿಎಸ್ಇ ಬೋರ್ಡ್‌ನ 10 ಮತ್ತು 12 ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಕಳೆ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶದಲ್ಲಿ ಏರಿಕೆಯಾಗಿದೆ. 10 ನೇ ತರಗತಿಯಲ್ಲಿ ಶೇ.99.47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 12 ನೇ ತರಗತಿಯಲ್ಲಿ ಶೇ. 98.19 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕಳೆದ ವರ್ಷ ಕ್ರಮವಾಗಿ 10 ಹಾಗೂ 12ನೇ ತರಗತಿಯಲ್ಲಿ ಶೇ.98.94 ಹಾಗೂ ಶೇ.96.93ರಷ್ಟು ಫಲಿತಾಂಶ ಬಂದಿತ್ತು.
ಎಂದಿನಂತೆ ಈ ಸಲವೂ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 10ನೇ ತರಗತಿ ಫಲಿತಾಂಶದಲ್ಲಿ ಇಂಡೋನೆಷ್ಯಾ, ಸಿಂಗಾಪುರ ಹಾಗೂ ದುಬೈ ಮೂಲದ ಶಾಲೆಗಳು ಶೇ 100 ರಷ್ಟು ಫಲಿತಾಂಶದ ಸಾಧನೆ ಮಾಡಿದ್ದರೆ, 12 ನೇ ತರಗತಿ ಫಲಿತಾಂಶದಲ್ಲಿ ಸಿಂಗಾಪುರ . ದುಬೈನ ಶಾಲೆಗಳು ಅತ್ಯುತ್ತಮ ಸಾಧನೆ ಮಾಡಿವೆ. ಫೆಬ್ರವರಿ ಮತ್ತು ಏಪ್ರಿಲ್ ತಿಂಗಳ ನಡುವೆ ಬೋರ್ಡ್ 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಫಲಿತಾಂಶ ನಡೆಸಿತ್ತು.