ಎಸ್‌ಐಆರ್ ರದ್ದತಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ತಮಗೆ ಸೋಮವಾರ ಜ್ಞಾಪನಾ ಪತ್ರ ಸಲ್ಲಿಸಲಿದ್ದ ಇಂಡಿಯಾ ಕೂಟದ ನಾಯಕರನ್ನು ಭೇಟಿಯಾಗಲು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಸೂರ್ಯ ಕಾಂತ್ ಅವರು ನಿರಾಕರಿಸಿದ್ದಾರೆ.
ನವದೆಹಲಿ: ಎಸ್‌ಐಆರ್ ರದ್ದತಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ತಮಗೆ ಸೋಮವಾರ ಜ್ಞಾಪನಾ ಪತ್ರ ಸಲ್ಲಿಸಲಿದ್ದ ಇಂಡಿಯಾ ಕೂಟದ ನಾಯಕರನ್ನು ಭೇಟಿಯಾಗಲು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಸೂರ್ಯ ಕಾಂತ್ ಅವರು ನಿರಾಕರಿಸಿದ್ದಾರೆ.
ನಿರ್ಧಾರಕ್ಕೆ ಕಾರಣವೇನೆಂದು ಕೂಟಕ್ಕೆ ಇ-ಮೇಲ್ ಮೂಲಕ ತಿಳಿಸಿದ್ದಾರೆ
ತಮ್ಮ ಈ ನಿರ್ಧಾರಕ್ಕೆ ಕಾರಣವೇನೆಂದು ಕೂಟಕ್ಕೆ ಇ-ಮೇಲ್ ಮೂಲಕ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದ ವಿಪಕ್ಷ ಕೂಟದ 10 ಸದಸ್ಯರ ನಿಯೋಗ, ಎಸ್‌ಐಆರ್ ವೇಳೆ ಅಳಿಸಲಾದ ಹೆಸರುಗಳ ಮರುಸೇರ್ಪಡೆ, ಸಿಇಸಿ ಜ್ಞಾನೇಶ್ ರಾಜೀನಾಮೆ, ಕಳೆದೆರಡು ವರ್ಷದಲ್ಲಿ ನಡೆದ ಎಲ್ಲಾ ಚುನಾವಣೆಗಳ ರದ್ದತಿ ಮತ್ತು ಇವಿಎಂ ಬದಲು ಮತಪತ್ರಗಳ ಬಳಕೆಗೆ ಒತ್ತಾಯಿಸಿ ಜ್ಞಾಪನಾ ಪತ್ರ ಸಲ್ಲಿಸಿತ್ತು.
ಭೇಟಿಗೆ ನಿರಾಕರಿಸಿದ್ದಾರೆ.
ಇದರ ಬೆನ್ನಲ್ಲೇ, ಸೋಮವಾರ ಸಿಜೆಐ ಅವರಿಗೂ ಇದನ್ನು ಸಲ್ಲಿಸಲಾಗುವುದು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದರು. ಆದರೀಗ ಭೇಟಿಗೆ ಅವರು ನಿರಾಕರಿಸಿದ್ದಾರೆ.
ಸಿಜೆಐ ಸೂರ್ಯಕಾಂತ್ ಅವರ ಹೇಳಿಕೆಯಿಂದಾಗಿಯೇ ಕಾಕ್ರೋಚ್ ಜನತಾ ಪಾರ್ಟಿಯ ಉಗಮವಾಗಿತ್ತು ಎಂಬುದು ಗಮನಾರ್ಹ

