ಲಾರೆನ್ಸ್‌ ಬಿಷ್ಣೋಯಿ ಮುಂದಿನ ಗುರಿ ಹಿಂದೂ ದೇವತೆಗಳ ಬಗ್ಗೆ ಹಾಸ್ಯ ಮಾಡುವ ವಿದೂಷಕ ಫಾರುಕಿ

| Published : Oct 16 2024, 12:56 AM IST / Updated: Oct 16 2024, 05:00 AM IST

ಸಾರಾಂಶ

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಗೈದ ಪಾತಕಿ ಲಾರೆನ್ಸ್‌ ಬಿಷ್ಣೋಯಿ ತಂಡದ ಹಿಟ್‌ಲಿಸ್ಟ್‌ನಲ್ಲಿ ಹಿಂದೂ ದೇವತೆಗಳನ್ನು ಪದೇ ಪದೇ ಹಾಸ್ಯ ಮಾಡುವ ವಿದೂಷಕ ಮುನಾವರ್‌ ಫಾರುಕಿ ಇದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಗೈದ ಪಾತಕಿ ಲಾರೆನ್ಸ್‌ ಬಿಷ್ಣೋಯಿ ತಂಡದ ಹಿಟ್‌ಲಿಸ್ಟ್‌ನಲ್ಲಿ ಹಿಂದೂ ದೇವತೆಗಳನ್ನು ಪದೇ ಪದೇ ಹಾಸ್ಯ ಮಾಡುವ ವಿದೂಷಕ ಮುನಾವರ್‌ ಫಾರುಕಿ ಇದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.

 ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬಂಧಿತರ ವಿಚಾರಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಫಾರುಕಿ ಭದ್ರತೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಮುನಾವರ್ 2021ರಲ್ಲಿ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವತೆಗಳ ಬಗ್ಗೆ ಅಸಭ್ಯವಾಗಿ ಟೀಕೆ ಮಾಡಿದ ಆರೋಪದಿಂದ ಆತನ ಮೇಲೆ ಬಿಷ್ಣೋಯಿ ತೀವ್ರವಾಗಿ ಕೋಪಗೊಂಡಿದ್ದು, ಆತನ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.