ಸಾರಾಂಶ
ಕಾಂಗ್ರೆಸ್‌ನ ಪ್ರಣಾಳಿಕೆಯಾದ ನ್ಯಾಯಪತ್ರದ ಕುರಿತು ವೈಯಕ್ತಿಕವಾಗಿ ವಿವರಿಸಲು ಸಮಯ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದು ಸಮಯಾವಕಾಶ ಕೋರಿದ್ದಾರೆ.
ನವದೆಹಲಿ: ಕಾಂಗ್ರೆಸ್‌ನ ಪ್ರಣಾಳಿಕೆಯಾದ ನ್ಯಾಯಪತ್ರದ ಕುರಿತು ವೈಯಕ್ತಿಕವಾಗಿ ವಿವರಿಸಲು ಸಮಯ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದು ಸಮಯಾವಕಾಶ ಕೋರಿದ್ದಾರೆ.
ಎರಡು ಪುಟಗಳಿರುವ ಪತ್ರದಲ್ಲಿ ‘ನಮ್ಮ ‘ನ್ಯಾಯಪತ್ರ’ ದೇಶದ ಏಳಿಗೆಗೆ, ಜನರ ಅಭಿವೃದ್ಧಿಗಾಗಿ ಘೋಷಿಸಿರುವ ಯೋಜನೆಗಳು. ಮೋದಿಯವರೆ ನಿಮ್ಮ ಸಲಹೆಗಾರರು ತಪ್ಪು ಮಾಹಿತಿ ನೀಡಿದ್ದಾರೆ. ಚುನಾವಣಾ ರ್‍ಯಾಲಿಗಳಲ್ಲಿ ಮತದಾರರಿಗೆ ತಪ್ಪು ಮಾಹಿತಿ ನೀಡುವುದು ಸೂಕ್ತವಲ್ಲ. ಹಾಗೆಯೇ ಕೋಮು ಗಲಭೆ ಸೃಷ್ಟಿಸುವಂತಹ ಮಾತುಗಳನ್ನಾಡುವುದು ನಿಮ್ಮ ಸ್ಥಾನಕ್ಕೆ ಶೋಭೆಯಲ್ಲ.
ಆದ್ದರಿಂದ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಏನಿದೆ ಎಂಬುದನ್ನು ನಾನು ವೈಯಕ್ತಿಯವಾಗಿ ವಿವರಿಸಲು ಇಚ್ಛಿಸುತ್ತೇನೆ. ಆದ್ದರಿಂದ ನನಗೆ ಸಮಯಾವಕಾಶವನ್ನು ಕೊಡಬೇಕು’ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.