ಸಾರಾಂಶ
ಚುನಾವಣಾ ಬಾಂಡ್ ಬಿಜೆಪಿಯ ಭ್ರಷ್ಟ ತಂತ್ರವನ್ನು ಬಯಲು ಮಾಡಿದೆ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ.
ನವದೆಹಲಿ: ಚುನಾವಣಾ ಬಾಂಡ್‌ಗಳ ಅಂಕಿಅಂಶಗಳು ಬಿಜೆಪಿಯ ‘ಭ್ರಷ್ಟ ತಂತ್ರ’ವನ್ನು ಬಯಲು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ‘ಇಡಿ, ಸಿಬಿಐ, ಐಟಿ ದಾಳಿ ಹಾಗೂ ಚುನಾವಣಾ ಬಾಂಡ್ ನಡುವಿನ ಸಂಬಂಧ ಊಹೆಯಿಂದ ಕೂಡಿದೆ ಎಂದು ವರದಿ ಮಾಡಿರುವ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವ ಕಂಪನಿ ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಚುನಾವಣಾ ಬಾಂಡ್ ಹಗರಣವನ್ನು ನಿರ್ವಹಿಸುತ್ತಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ‘ಪ್ರಧಾನ ಮಂತ್ರಿ ಹಫ್ತಾ ವಸೂಲಿ ಯೋಜನೆ’ ಜಾರಿಗೊಳಿಸುವ ಜಾರಿ ನಿರ್ದೇಶನಾಲಯ ಎರಡಕ್ಕೂ ಹಣಕಾಸು ಸಚಿವರು ಉಸ್ತುವಾರಿ ವಹಿಸಿದ್ದಾರೆ’ ಎಂದು ಜೈರಾಮ್ ಪೋಸ್ಟ್ ಮಾಡಿದ್ದಾರೆ.