ಕಾಂಗ್ರೆಸ್‌ ಅಜೆಂಡಾ ಸಂಪೂರ್ಣ ಬಯಲು : ಅಮಿತ್ ಶಾ

| Published : Apr 25 2024, 01:07 AM IST / Updated: Apr 25 2024, 05:10 AM IST

ಸಾರಾಂಶ

ಸಂಪತ್ತಿನ ಮರುಹಂಚಿಕೆ ಕುರಿತಾಗಿ ಕಾಂಗ್ರೆಸ್‌ ಮುಖಂಡ ಸ್ಯಾಮ್ ಪಿತ್ರೋಡಾ ನೀಡಿರುವ ಹೇಳಿಕೆಯು ಕಾಂಗ್ರೆಸ್‌ ಪಕ್ಷದ ಅಜೆಂಡಾವನ್ನು ಸಂಪೂರ್ಣವಾಗಿ ಬಯಲು ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಿಡಿ ಕಾರಿದ್ದಾರೆ.

ಕೊಚ್ಚಿ: ಸಂಪತ್ತಿನ ಮರುಹಂಚಿಕೆ ಕುರಿತಾಗಿ ಕಾಂಗ್ರೆಸ್‌ ಮುಖಂಡ ಸ್ಯಾಮ್ ಪಿತ್ರೋಡಾ ನೀಡಿರುವ ಹೇಳಿಕೆಯು ಕಾಂಗ್ರೆಸ್‌ ಪಕ್ಷದ ಅಜೆಂಡಾವನ್ನು ಸಂಪೂರ್ಣವಾಗಿ ಬಯಲು ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಿಡಿ ಕಾರಿದ್ದಾರೆ.

ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಮನಮೋಹನ್‌ ಸಿಂಗ್‌ ಬಹಳ ಹಿಂದೆಯೇ ಮುಸ್ಲಿಮರಿಗೆ ಆಸ್ತಿಯ ಹಕ್ಕಿರುವುದಾಗಿ ಹೇಳಿದ್ದರು. ಈಗ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸಂಪತ್ತಿನ ಮರುಹಂಚಿಕೆ ಕುರಿತು ಪ್ರಸ್ತಾಪಿಸಿದೆ. ಸ್ಯಾಮ್‌ ಪಿತ್ರೋಡಾ ಕೂಡ ಇದಕ್ಕೆ ಪುಷ್ಟಿ ನೀಡುವಂತೆ ಹೇಳಿಕೆ ನೀಡಿರುವುದು ಕಾಂಗ್ರೆಸ್‌ ಅಜೆಂಡಾವನ್ನು ಬಯಲು ಮಾಡಿದೆ. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಿಂದ ಈ ಅಂಶವನ್ನು ಕೂಡಲೇ ತೆಗೆಯಬೇಕು. ಇಲ್ಲವೇ ಇದುವೇ ನಮ್ಮ ನಿಜವಾದ ಉದ್ದೇಶ ಎಂಬುದಾಗಿ ಒಪ್ಪಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ನಿರ್ಮಲಾ ಆಕ್ಷೇಪ:  ಪಿತ್ರಾರ್ಜಿತ ಆಸ್ತಿ ಕಾಯ್ದೆ ಜಾರಿಗೆ ತಂದರೆ ಅದು ಬಡ ಹಾಗೂ ಮಧ್ಯಮ ವರ್ಗದವರಿಗೆ ಭಾರಿ ಹೊಡೆತ ನೀಡಲಿದೆ. ಏಕೆಂದರೆ ಇದ್ದ ಚಿಕ್ಕ ಪ್ರಮಾಣದ ಆಸ್ತಿಯೂ ಮಕ್ಕಳಿಗೆ ವರ್ಗಾವಣೆ ಆಗುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕಿಡಿಕಾರಿದ್ದಾರೆ.