ಸಿಯಾಚಿನ್‌ ಸನಿಹದ ಪಿಒಕೆ ಬಳಿ ಚೀನಾದ ಹೊಸ ರಸ್ತೆ ನಿರ್ಮಾಣ

| Published : Apr 26 2024, 12:50 AM IST / Updated: Apr 26 2024, 05:14 AM IST

ಸಾರಾಂಶ

ಭಾರತದ ನೆರೆಹೊರೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮುಂದುವರೆಸಿರುವ ಚೀನಾ, ಇದೀಗ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಎಂಬ ಹಿರಿಮೆ ಹೊಂದಿರುವ ಸಿಯಾಚಿನ್‌ ತಪ್ಪಲಿನ ಪಾಕ್‌ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಹೊಸ ರಸ್ತೆ ನಿರ್ಮಾಣ ಆರಂಭಿಸಿದೆ.

ಶ್ರೀನಗರ: ಭಾರತದ ನೆರೆಹೊರೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮುಂದುವರೆಸಿರುವ ಚೀನಾ, ಇದೀಗ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಎಂಬ ಹಿರಿಮೆ ಹೊಂದಿರುವ ಸಿಯಾಚಿನ್‌ ತಪ್ಪಲಿನ ಪಾಕ್‌ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಹೊಸ ರಸ್ತೆ ನಿರ್ಮಾಣ ಆರಂಭಿಸಿದೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿ ಸೆರೆಹಿಡಿದ ಉಪಗ್ರಹ ಚಿತ್ರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕಿಸ್ತಾನವು ತಾನು ಅತಿಕ್ರಮಿಸಿಕೊಂಡಿರುವ ಕಾಶ್ಮೀರದ ಶಾಕ್ಸ್ ಗಾಮ್ ಪ್ರದೇಶವನ್ನು1963ರಲ್ಲಿ ಚೀನಾಕ್ಕೆ ಬಿಟ್ಟುಕೊಟ್ಟಿತ್ತು. ಇದು ಚೀನಾದ ಜಿ219 ಹೆದ್ದಾರಿಯಿಂದ ಕವಲೊಡೆಯುತ್ತದೆ. ಆ ಪ್ರದೇಶದಲ್ಲೇ ಚೀನಾ ಇದೀಗ ರಸ್ತೆ ನಿರ್ಮಿಸುತ್ತಿದೆ. ಈ ಭಾಗ ಐತಿಹಾಸಿಕವಾಗಿ ಭಾರತದ ಭಾಗವಾಗಿತ್ತು. 370 ವಿಧಿ ರದ್ಧತಿ ಬಳಿಕ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹೊಸ ನಕ್ಷೆಯಲ್ಲಿ ಈ ಪ್ರದೇಶವನ್ನು ಭಾರತದ ಭಾಗವೆಂದು ಪ್ರತಿಪಾದಿಸಲಾಗಿತ್ತು.