ನೋಟು ರದ್ದತಿಯಿಂದ ₹60 ಕೋಟಿ ಸಾಲ ಕಟ್ಟಿಲ್ಲ: ಕುಂದ್ರಾ

| Published : Oct 11 2025, 12:03 AM IST

ಸಾರಾಂಶ

ಉದ್ಯಮಿಯೊಬ್ಬರಿಗೆ 60 ಕೋಟಿ ರು. ವಂಚಿಸಿರುವ ಆರೋಪ ಎದುರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ, ‘500 ಹಾಗೂ 1000 ರು. ನೋಟು ರದ್ದತಿ ಕಾರಣ ಉದ್ಯಮಕ್ಕೆ ಭಾರೀ ನಷ್ಟವಾಗಿದ್ದರಿಂದ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.

- 60 ಕೋಟಿ ರು. ವಂಚನೆ ಬಗ್ಗೆ ಸ್ಪಷ್ಟನೆಮುಂಬೈ: ಉದ್ಯಮಿಯೊಬ್ಬರಿಗೆ 60 ಕೋಟಿ ರು. ವಂಚಿಸಿರುವ ಆರೋಪ ಎದುರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ, ‘500 ಹಾಗೂ 1000 ರು. ನೋಟು ರದ್ದತಿ ಕಾರಣ ಉದ್ಯಮಕ್ಕೆ ಭಾರೀ ನಷ್ಟವಾಗಿದ್ದರಿಂದ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಎದುರು ವಿಚಾರಣೆಗೆ ಹಾಜರಾದ ರಾಜ್‌, ‘ನಮ್ಮ ಕಂಪನಿ ಎಲೆಕ್ಟ್ರಿಕಲ್‌ ಮತ್ತು ಗೃಹೋಪಯೋಗಿ ವಸ್ತುಗಳ ವ್ಯಾಪಾರ ಮಾಡುತ್ತಿತ್ತು. ಆದರೆ 2016ರಲ್ಲಿ ಕೇಂದ್ರ ಸರ್ಕಾರ 500 ರು. ಮತ್ತು 1000 ರು. ಮುಖಬೆಲೆಯ ನೋಟು ರದ್ದುಗೊಳಿಸಿದ್ದರಿಂದ ಉದ್ಯಮಕ್ಕೆ ನಷ್ಟವಾಯಿತು’ ಎಂದಿದ್ದಾರೆ. ಶಾಪಿಂಗ್‌ ವೇದಿಕೆಯಾಗಿರುವ ‘ಬೆಸ್ಟ್‌ ಡೀಲ್‌ ಟಿವಿ’ಯ ಸಹ-ಸಂಸ್ಥಾಪಕರಾಗಿರುವ ಶಿಲ್ಪಾ ಹಾಗೂ ರಾಜ್‌, ದೀಪಕ್‌ ಕೊಠಾರಿಗೆ ಔದ್ಯಮಿಕ ಉದ್ದೇಶಕ್ಕೆಂದು 60 ಕೋಟಿ ರು. ಸಾಲ ಪಡೆದು ಅನ್ಯ ಕಾರ್ಯಕ್ಕೆ ಬಳಸಿದ್ದರು. ಅಷ್ಟರಲ್ಲೇ ಕಂಪನಿ ದಿವಾಳಿಯಾಗಿದ್ದರಿಂದ ಸಾಲ ಕಟ್ಟಿರಲಿಲ್ಲ ಎಂಬ ಆರೋಪವಿದೆ. ಈ ಸಂಬಂಧ ರಾಜ್‌ 2 ಬಾರಿ ಹಾಗೂ ಶಿಲ್ಪಾ ಒಮ್ಮೆ ವಿಚಾರಣೆಗೆ ಒಳಗಾಗಿದ್ದರು.