ಸಾರಾಂಶ
60 ಕೋಟಿ ರು. ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದಾರೆ.
- ಉದ್ಯಮಿಗೆ 60 ಕೋಟಿ ರು. ವಂಚನೆ ಪ್ರಕರಣಪಿಟಿಐ ಮುಂಬೈ
60 ಕೋಟಿ ರು. ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದಾರೆ.ಈಗ ನಿಷ್ಕ್ರಿಯವಾಗಿರುವ ತಮ್ಮ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ಸೆಲೆಬ್ರಿಟಿ ದಂಪತಿಗಳು ಉದ್ಯಮಿಯೊಬ್ಬರಿಗೆ ಸುಮಾರು 60 ಕೋಟಿ ರು. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ಲುಕೌಟ್ ನೋಟಿಸ್ ಹೊರಡಿಸಿರುವ ಮುಂಬೈ ಪೊಲೀಸರು ಶಿಲ್ಪಾ ಮತ್ತು ಕುಂದ್ರಾ ಅವರ ಪ್ರಯಾಣ ದಾಖಲೆ ಪರಿಶೀಲಿಸುತ್ತಿದ್ದಾರೆ. ಕಂಪನಿಯ ಲೆಕ್ಕಪರಿಶೋಧಕರನ್ನು ಸಹ ವಿಚಾರಣೆಗೆ ಕರೆಯಲಾಗಿದೆ.ಏನಿದು ಪ್ರಕರಣ?:2015 ರಿಂದ 2023 ರ ನಡುವೆ, ದಂಪತಿಗಳು ತಮ್ಮ ಬೆಸ್ಟ್ ಡೀಲ್ ಕಂಪನಿಯ ವ್ಯವಹಾರವನ್ನು ವಿಸ್ತರಿಸುವ ನೆಪದಲ್ಲಿ ತಮ್ಮಿಂದ 60 ಕೋಟಿ ರು.ಗಳನ್ನು ಶೇ.12ರ ಬಡ್ಡಿ ದರದಲ್ಲಿ ಪಡೆದಿದ್ದಾರೆ. ಆದರೆ ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ. ನಂತರ ಅದನ್ನು ತೆರಿಗೆ ಉಳಿತಾಯಕ್ಕಾಗಿ ಹೂಡಿಕೆಯಾಗಿ ತೋರಿಸಿದ್ದಾರೆ ಎಂದು ಉದ್ಯಮಿ ದೀಪಕ್ ಕೊಠಾರಿ ಆರೋಪಿಸಿದ್ದರು.
ಈ ನಡುವೆ ಇತ್ತೀಚೆಗೆ ಕಂಪನಿಯ ದಿವಾಳಿ ಪ್ರಕ್ರಿಯೆ ಆರಂಭವಾಗಿದ್ದು, ಅಷ್ಟರಲ್ಲಿ ಕಂಪನಿಗೆ ಶಿಲ್ಪಾ ರಾಜೀನಾಮೆ ನೀಡಿದ್ದಾರೆ. ಕೊಟ್ಟ ಹಣ ಮರಳಿಸಿಲ್ಲ ಎಂದು ಕೊಠಾರಿ ದೂರಿದ್ದಾರೆ.