ಸಾರಾಂಶ
ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯ ಬಿಜೆಪಿ ಸದಸ್ಯ ಮನೋಹರ್ ಲಾಲ್ ಧಕಡ್ ಎಂಬಾತನ ಆಕ್ಷೇಪಾರ್ಹ ವಿಡಿಯೋ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಒಬ್ಬ ಮಹಿಳೆಯೊಂದಿಗೆ ಧಕಡ್ ಹೆದ್ದಾರಿಯಲ್ಲಿ ನಿಲ್ಲಿಸಿದ ಕಾರಿನಲ್ಲೇ ರಾಸಲೀಲೆ ನಡೆಸಿದ್ದು ಕಂಡುಬರುತ್ತದೆ.
ಮಂಡಸೌರ್: ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯ ಬಿಜೆಪಿ ಸದಸ್ಯ ಮನೋಹರ್ ಲಾಲ್ ಧಕಡ್ ಎಂಬಾತನ ಆಕ್ಷೇಪಾರ್ಹ ವಿಡಿಯೋ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಒಬ್ಬ ಮಹಿಳೆಯೊಂದಿಗೆ ಧಕಡ್ ಹೆದ್ದಾರಿಯಲ್ಲಿ ನಿಲ್ಲಿಸಿದ ಕಾರಿನಲ್ಲೇ ರಾಸಲೀಲೆ ನಡೆಸಿದ್ದು ಕಂಡುಬರುತ್ತದೆ. ಈ ವಿಡಿಯೋ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 8 ಲೇನ್‌ನದ್ದಾಗಿದೆ ಹಾಗೂ ಇದು ಹೆದ್ದಾರಿಯಲ್ಲಿ ಅಳವಡಿಸಲಾದ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದರ ಬೆನ್ನಲ್ಲೇ ಆತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ.
ವಿಡಿಯೋದಲ್ಲೇನಿದೆ?:
ಇದರಲ್ಲಿ ಮನೋಹರ್ ಲಾಲ್ ಧಕಡ್ ತನ್ನ ಕಾರನ್ನು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ನಿಲ್ಲಿಸುತ್ತಾನೆ. ಮೊದಲು ಆ ಕಾರಿನಿಂದ ಒಬ್ಬ ಮಹಿಳೆ ಬಟ್ಟೆ ಇಲ್ಲದೆ ಹೊರಬರುತ್ತಾಳೆ. ನಂತರ ಧಕಡ್ ಕೂಡ ಅರೆಬೆತ್ತಲೆಯಾಗಿ ಹೊರಬರುತ್ತಾನೆ. ಈ ವಿಡಿಯೋ 8ನೇ ಲೇನ್‌ನಲ್ಲಿ ಅಳವಡಿಸಲಾದ ಕ್ಯಾಮೆರಾಗಳಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ.
ವಿಡಿಯೋದಲ್ಲಿ ಧಕಡ್ ಕಾಣಿಸಿಕೊಂಡಿರುವ ಬಿಳಿ ಕಾರಿನ ನೋಂದಣಿ ಸಂಖ್ಯೆ ಎಂಪಿ 14, ಸಿಸಿ 4782 ಆಗಿದ್ದು, ಇದು ಮನೋಹರ್ ಲಾಲ್ ಧಕಡ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ.
ಈತ ಬಿಜೆಪಿ ನಾಯಕನಲ್ಲ- ಸ್ಪಷ್ಟನೆ:
ಧಕದ್ ಅವರ ಪತ್ನಿ ಮಂಡಸೌರ್ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯೆ. ಆದರೆ ಧಕಡ್ ಪಕ್ಷದ ನಾಯಕನಲ್ಲ. ಆತ ಆನ್‌ಲೈನ್‌ನಲ್ಲಿ ಬಿಜೆಪಿ ಸದಸ್ಯತ್ವ ಪಡೆದಿದ್ದ ಎಂದು ಪಕ್ಷದ ಮಂಡಸೌರ್ ಜಿಲ್ಲಾಧ್ಯಕ್ಷ ರಾಜೇಶ್ ದೀಕ್ಷಿತ್ ಹೇಳಿದ್ದಾರೆ. ಈ ನಡುವೆ ಧಕಡ್ ಮಹಾಸಭಾ ಎಂಬ ಸಂಘಟನೆಯಿಂದ ಧಕಡ್‌ನನ್ನು ವಜಾ ಮಾಡಲಾಗಿದೆ.