ಸಾರಾಂಶ
ವಂಚನೆ, ನಕಲಿ ದಾಖಲೆ ಕೇಸಲ್ಲಿ ಜಾಮೀನು ನಕಾರಪಿಟಿಐ ನವದೆಹಲಿ
ಶೃಂಗೇರಿ ಶಾರದಾ ಪೀಠ ನಡೆಸುವ ಶಿಕ್ಷಣ ಸಂಸ್ಥೆಯ ಸಂಚಾಲಕನಾಗಿದ್ದುಕೊಂಡು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದೆಹಲಿಯ ಚೈತನ್ಯಾನಂದ ಸರಸ್ವತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿದೆ.ವಂಚನೆ, ಫೋರ್ಜರಿ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆತ ದೆಹಲಿ ಕೋರ್ಟ್‌ನ ಮರೆಹೋಗಿದ್ದ. ಅರ್ಜಿ ವಜಾದೊಂದಿಗೆ ಆತನಿಗೆ ಬಂಧನ ಭೀತಿ ಆರಂಭವಾಗಿದೆ.
ದಾಖಲೆ ನಕಲಿಸುವುದು, ಮೋಸ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದು, ಆಸ್ತಿಯನ್ನು ಹಸ್ತಾಂತರಿಸಲು ಅಥವಾ ಅದನ್ನು ಉಳಿಸಿಕೊಳ್ಳಲು ಒಪ್ಪಿಗೆ ನೀಡುವಂತೆ ವ್ಯಕ್ತಿಯನ್ನು ಪ್ರೇರೇಪಿಸುವುದು, ಕ್ರಿಮಿನಲ್ ಪಿತೂರಿ ಮತ್ತು ನಂಬಿಕೆ ಉಲ್ಲಂಘನೆ ಮಾಡಿರುವುದಾಗಿ ಆರೋಪಿಸಿ ಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಬಗ್ಗೆ ಮಾತನಾಡಿರುವ ಹೆಚ್ಚುವರಿ ಸೆಷನ್ಸ್ ನ್ಯಾ। ಹರ್ದೀಪ್ ಕೌರ್, ‘ಈ ಪ್ರಕರಣದ ತನಿಖೆಗೆ ಅರ್ಜಿದಾರ/ಆರೋಪಿಯ ಉಪಸ್ಥಿತಿ ಅಗತ್ಯ. ಆದರೆ ಸದ್ಯ ಅವರು ನೀಡಿರುವ ವಿಳಾಸದಲ್ಲಿಲ್ಲ. ಮೊಬೈಲ್ ಕೂಡ ಆಫ್ ಆಗಿದೆ. ಕೇಸ್‌ನ ಗಂಭೀರತೆಯನ್ನು ಪರಿಗಣಿಸಿ ಬೇಲ್ ತಿರಸ್ಕರಿಸಲಾಗಿದೆ’ ಎಂದರು.8 ಕೋಟಿ ರು. ಫ್ರೀಜ್:ಅತ್ತ ಈ ಸ್ವಾಮಿಯ 18 ಬ್ಯಾಂಕ್ ಖಾತೆಗಳು ಮತ್ತು 28 ಎಫ್‌ಡಿಗಳಲ್ಲಿದ್ದ 8 ಕೋಟಿ ರು.ಅನ್ನು ಫ್ರೀಜ್ ಮಾಡಲಾಗಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಮತ್ತಷ್ಟು ಆರೋಪ:ಈ ನಡುವೆ ತಾನು ಸಂಚಾಲಕನಾಗಿದ್ದ ಶಿಕ್ಷಣ ಸಂಸ್ಥೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಹೆಚ್ಚು ಶುಲ್ಕ ನೀಡುವಂತೆ ಸ್ವಾಮಿ ಬೆದರಿಸಿದ್ದ ಎಂಬ ಆರೋಪ ಕೇಳಿಬಂದಿದೆ. ‘ನಾನು ನಿಗದಿತ 60 ಸಾವಿರ ರು. ಶುಲ್ಕ ಕಟ್ಟಿದ್ದರೂ ಹೆಚ್ಚು ಶುಲ್ಕ ಕಟ್ಟುವಂತೆ ಕೇಳಿದ್ದ’ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
==ಚೆಕ್ ಬೌನ್ಸ್ ಕೇಸು ತ್ವರಿತ ಇತ್ಯರ್ಥಕ್ಕೆ ಸುಪ್ರೀಂ ಮಾರ್ಗಸೂಚಿ
ದೇಶದಲ್ಲಿ ಲಕ್ಷಾಂತರ ಚೆಕ್‌ಬೌನ್ಸ್ ಪ್ರಕರಣ ಬಾಕಿ ಹಿನ್ನೆಲೆನವದೆಹಲಿ: ದೇಶದಲ್ಲಿ ಚೆಕ್‌ಬೌನ್ಸ್‌ಗೆ ಸಂಬಂಧಿಸಿದ ಲಕ್ಷಾಂತರ ಪ್ರಕರಣಗಳು ಬಾಕಿಯಿದ್ದು, ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ತನ್ನ ಹಳೆಯ ಮಾರ್ಗಸೂಚಿಯನ್ನು ರದ್ದುಗೊಳಿಸಿ, ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಸಾಕ್ಷ್ಯಗಳ ದಾಖಲಿಗೆ ಮೊದಲೇ ಆರೋಪಿಯು ವಿಚಾರಣಾ ನ್ಯಾಯಾಲಯದಲ್ಲಿ ಬೌನ್ಸ್ ಆದ ಮೊತ್ತವನ್ನು ಪಾವತಿಸಲು ಇಚ್ಛಿಸಿದರೆ, ಆತನಿಗೆ ನ್ಯಾಯಾಲಯವು ಯಾವುದೇ ದಂಡವನ್ನು ಹಾಕುವಂತಿಲ್ಲ.ಒಂದು ವೇಳೆ ಸ್ಥಳೀಯ ಕೋರ್ಟ್ ವಿಚಾರಣೆ ನಂತರ ಮತ್ತು ತೀರ್ಪಿಗೂ ಮುನ್ನ ಮೊತ್ತ ಪಾವತಿಸಿದರೆ ಮೊತ್ತದ ಶೇ.5ರಷ್ಟು ದಂಡವಾಗಿ ಪಾವತಿ ಮಾಡಬೇಕಾಗುತ್ತದೆ.
ಅದೇ ರೀತಿ ತೀರ್ಪಿನ ವಿರುದ್ಧ ಮೇಲ್ಮನವಿ ವಿಚಾರಣೆ ನಡೆದಾಗ ಸೆಷನ್ಸ್ ಅಥವಾ ಹೈಕೋರ್ಟ್‌ನಲ್ಲಿ ಶೇ.7.5ರಷ್ಟು ದಂಡ ಕಟ್ಟಬೇಕಾಗುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ಗೆ ಹೋದರೆ ಅಲ್ಲಿ ಶೇ.10ರಷ್ಟು ದಂಡವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಮಾರ್ಗಸೂಚಿ ಸೂಚಿಸಿದೆ.ಇದೇ ವೇಳೆ ಚೆಕ್ ಬೌನ್ಸ್ ಪ್ರಕರಣವು ಎನ್‌ಐ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ಅರೆ ಕ್ರಿಮಿನಲ್ ಪ್ರಕರಣವಾಗಿದ್ದು, ಮೊದಲಿಗೆ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ಈ ವೇಳೆ ಎರಡೂ ಕಡೆಯವರಿಗೂ ಮಾತುಕತೆ ಸಂಧಾನಕ್ಕೆ ಅವಕಾಶವಿರುತ್ತದೆ ಎಂದು ಪೀಠ ತಿಳಿಸಿದೆ.==
ವಿಶ್ವಸಂಸ್ಥೇಲಿ ನೆತನ್ಯಾಹು ಭಾಷಣ ಗಾಜಾ ಲೌಡ್‌ಸ್ಪೀಕರಲ್ಲಿ ನೇರಪ್ರಸಾರ!ಗಾಜಾ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹಮಾಸ್ ಜತೆಗಿನ ಸಂಘರ್ಷದ ಬಗ್ಗೆ ಶುಕ್ರವಾರ ಮಾತನಾಡಿದ್ದು, ಹಮಾಸ್ ನಾಶಕ್ಕೆ ಕರೆ ನೀಡಿದ್ದಾರೆಎ. ಈ ವೇಳೆ ನೆತನ್ಯಾಹು ಸೂಚನೆಯ ಮೇರೆಗೆ ಗಾಜಾ ಗಡಿಯಲ್ಲಿ ದೊಡ್ಡ ಧ್ವನಿವರ್ಧಕಗಳನ್ನು ಬಳಸಿ ಅವರ ಮಾತುಗಳನ್ನು ನೇರಪ್ರಸಾರ ಮಾಡಲಾಯಿತು.ಇಸ್ರೇಲ್ ಸೇನೆಗೆ ಪ್ರಧಾನಿ ಕಚೇರಿಯಿಂದಲೇ ಈ ಆದೇಶ ಬಂದಿತ್ತು. ಗಾಜಾದಲ್ಲಿನ ಹಮಾಸ್ ಉಗ್ರರಿಗೆ ಸಂದೇಶ ಸಾರುವ ಸಲುವಾಗಿ ಗಡಿಯಲ್ಲಿ ಧ್ವನಿವರ್ಧಕ ಹಾಕಿ ಹಮಾಸ್ ಉಗ್ರರಿಗೆ ಸಂದೇಶ ರವಾನಿಸಲಾಯಿತು ಎಂದು ಇಸ್ರೇಲ್ ಸರ್ಕಾರದ ಮೂಲಗಳು ಹೇಳಿವೆ.ಸಭಾತ್ಯಾಗ:
ಈ ನಡುವೆ, ನೆತನ್ಯಾಹು ಅವರು ಭಾಷಣ ಆರಂಭಿಸಿದಾಗ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಹಲವು ಇಸ್ರೇಲ್ ವಿರೋಧಿ ರಾಷ್ಟ್ರಗಳ ಪ್ರತಿನಿಧಿಗಳು ಸಾಮೂಹಿಕವಾಗಿ ಸಭಾತ್ಯಾಗ ಮಾಡಿದರು.==
ಬೆಂಗಳೂರಿನಲ್ಲಿ ಚಿನ್ನದ ಬೆಲೆ 1.20 ಲಕ್ಷ ರು.: ದಾಖಲೆನವದೆಹಲಿ: ಗುರುವಾರ ಕೊಂಚ ಇಳಿಕೆ ಹಾದಿ ಇಳಿದಿದ್ದ ಚಿನ್ನದ ಬೆಲೆಯು ಶುಕ್ರವಾರ ಮತ್ತೆ ಏರುಗತಿಗೆ ಮರಳಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನ 10 ಗ್ರಾಂಗೆ 1500 ರು. ಏರಿಕೆಯಾಗಿ, ದಾಖಲೆಯ 1,20,100 ರು.ಗೆ ತಲುಪಿದೆ. ಅದೇ ರೀತಿ ಬೆಳ್ಳಿ ಬೆಲೆಯು ಕೇಜಿಗೆ 2100 ರು. ಏರಿಕೆಯಾಗಿ 1,45,000 ರು.ಗೆ ಜಿಗಿದಿದೆ.ಹಬ್ಬದ ಅವಧಿ ಮತ್ತು ಷೇರುಪೇಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಏರಿಕೆಯಾದ ಪರಿಣಾಮ ಚಿನ್ನದ ಬೆಲೆಯು ಗಗನಮುಖಿಯಾಯಿತು. ಅದೇ ರೀತಿ ಬೆಳ್ಳಿಗೂ ಸಹ ಹೂಡಿಕೆದಾರರಿಂದ ಭಾರಿ ಬೇಡಿಕೆ ಒದಗಿಬಂದ ಕಾರಣ ಅದು ಸಹ ಏರಿಕೆ ಮುಂದುವರಿಸಿತು.
ಗುರುವಾರ ಚಿನ್ನದ ಬೆಲೆಯು 1200 ರು. ಕುಸಿದು, 1,18,600 ರು.ಗೆ ತಲುಪಿತ್ತು. ಬೆಳ್ಳಿ ಮಾತ್ರ 300 ರು. ಏರಿ 1.42 ಲಕ್ಷ ರು.ಗೆ ತಲುಪಿ ದಾಖಲೆಯಾಗಿತ್ತು.