ಸಂತಾನ ಪಡೆಯುವ ಮುನ್ನವೇ ಗಂಭೀರ ಆರೋಗ್ಯ ಸಮಸ್ಯೆ: ಹಾಸಿಗೆ ಹಿಡಿದ ಪತಿಯ ವೀರ್ಯ ಸಂಗ್ರಹಕ್ಕೆ ಕೋರ್ಟ್‌ ಅನುಮತಿ

| Published : Aug 22 2024, 12:51 AM IST / Updated: Aug 22 2024, 05:01 AM IST

ಸಂತಾನ ಪಡೆಯುವ ಮುನ್ನವೇ ಗಂಭೀರ ಆರೋಗ್ಯ ಸಮಸ್ಯೆ: ಹಾಸಿಗೆ ಹಿಡಿದ ಪತಿಯ ವೀರ್ಯ ಸಂಗ್ರಹಕ್ಕೆ ಕೋರ್ಟ್‌ ಅನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂತಾನ ಪಡೆಯುವ ಮುನ್ನವೇ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿರುವ ಪತಿಯ ವೀರ್ಯವನ್ನು ವೈದ್ಯಕೀಯ ವಿಧಾನದಲ್ಲಿ ಪಡೆದು, ಕೃತಕ ಗರ್ಭಧಾರಣೆ ಉದ್ದೇಶಕ್ಕಾಗಿ ಅದನ್ನು ಸಂಗ್ರಹಿಸಿಡಲು ಅನುಮತಿ ನೀಡಬೇಕೆಂಬ ಪತ್ನಿಯ ಬೇಡಿಕೆಗೆ ಕೇರಳ ಹೈಕೋರ್ಟ್‌ ಅನುಮತಿ ನೀಡಿದೆ.

ಕೊಚ್ಚಿ: ಸಂತಾನ ಪಡೆಯುವ ಮುನ್ನವೇ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿರುವ ಪತಿಯ ವೀರ್ಯವನ್ನು ವೈದ್ಯಕೀಯ ವಿಧಾನದಲ್ಲಿ ಪಡೆದು, ಕೃತಕ ಗರ್ಭಧಾರಣೆ ಉದ್ದೇಶಕ್ಕಾಗಿ ಅದನ್ನು ಸಂಗ್ರಹಿಸಿಡಲು ಅನುಮತಿ ನೀಡಬೇಕೆಂಬ ಪತ್ನಿಯ ಬೇಡಿಕೆಗೆ ಕೇರಳ ಹೈಕೋರ್ಟ್‌ ಅನುಮತಿ ನೀಡಿದೆ. ತನ್ಮೂಲಕ ಮರಣಶಯ್ಯೆಯಲ್ಲಿರುವ ಪತಿಯಿಂದಲೇ ಸಂತಾನಭಾಗ್ಯ ಹೊಂದಲು ಬಯಸುತ್ತಿರುವ ಮಹಿಳೆಯ ನೆರವಿಗೆ ಧಾವಿಸಿದೆ.

ಪತಿಯ ವೈದ್ಯಕೀಯ ಸ್ಥಿತಿ ಗಂಭೀರವಾಗಿದೆ. ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಪತಿಯ ಅನುಮತಿ ಇಲ್ಲದೆಯೂ ವೀರ್ಯ ಪಡೆಯಲು ಕೋರ್ಟ್‌ ಅನುಮತಿ ನೀಡಿದೆ.

ನೆರವಿನಿಂದ ಕೂಡಿದ ಸಂತಾನಭಾಗ್ಯ ತಂತ್ರಜ್ಞಾನ ನಿಯಂತ್ರಣ ಕಾಯ್ದೆಯಡಿ ವೀರ್ಯ ಪಡೆಯಲು ಪತಿಯ ಒಪ್ಪಿಗೆ ಬೇಕು. ಆದರೆ ಪತಿ ಒಪ್ಪಿಗೆ ನೀಡುವ ಸ್ಥಿತಿ ಇಲ್ಲ. ಈ ವಿಷಯದಲ್ಲಿ ವಿಳಂಬ ಮಾಡಿದಷ್ಟೂ ತೊಂದರೆಯಾಗುತ್ತದೆ ಎಂದು ಮಹಿಳೆಯ ಪರ ವಕೀಲರು ವಾದಿಸಿದರು.

ಅದರಂತೆ ಮರಣಶಯ್ಯೆಯಲ್ಲಿರುವ ಪತಿಯ ದೇಹದಿಂದ ವೀರ್ಯವನ್ನು ಸಂಗ್ರಹಿಸಿ ಅದನ್ನು ಶೇಖರಿಸಿಡಲು ನ್ಯಾಯಾಲಯ ಒಪ್ಪಿಗೆ ನೀಡಿದೆ. ಆದರೆ ಕೃತಕ ಗರ್ಭಧಾರಣೆ ಪ್ರಕ್ರಿಯೆಯಡಿ ಮುಂದಿನ ಯಾವುದೇ ಕ್ರಮವನ್ನು ತನ್ನ ಒಪ್ಪಿಗೆ ಇಲ್ಲದೆ ನಡೆಸಕೂಡದು ಎಂದು ಹೇಳಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿದೆ. ನ್ಯಾಯಾಲಯದ ಅನುಮತಿಯಿಂದಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಪತಿಯ ವೀರ್ಯವನ್ನು ಸಂಗ್ರಹಿಸಿಟ್ಟುಕೊಂಡು, ಭವಿಷ್ಯದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮಗು ಪಡೆಯಲು ಮಹಿಳೆಗೆ ಅನುಕೂಲವಾಗಿದೆ.