ಕಾಂಗ್ರೆಸ್‌ ಆಡಳಿತದಲ್ಲಿ ಹನುಮಾನ್‌ ಚಾಲೀಸಾ ಕೂಡ ಅಪರಾಧ: ಮೋದಿ

| Published : Apr 24 2024, 02:21 AM IST

ಸಾರಾಂಶ

ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಹಿಂದೂಗಳ ಆಚರಣೆ ಮೇಲೆ ದಾಳಿ ನಡೆಯುತ್ತಿದೆ ಎಂದು ಮತ್ತೊಮ್ಮೆ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಆಡಳಿತದಲ್ಲಿ ಹನುಮಾನ್‌ ಚಾಲೀಸಾ ಕೇಳೋದು ಕೂಡಾ ಅಪರಾಧ ಎಂದು ಹರಿಹಾಯ್ದಿದ್ದಾರೆ.

ಜೈಪುರ: ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಹಿಂದೂಗಳ ಆಚರಣೆ ಮೇಲೆ ದಾಳಿ ನಡೆಯುತ್ತಿದೆ ಎಂದು ಮತ್ತೊಮ್ಮೆ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಆಡಳಿತದಲ್ಲಿ ಹನುಮಾನ್‌ ಚಾಲೀಸಾ ಕೇಳೋದು ಕೂಡಾ ಅಪರಾಧ ಎಂದು ಹರಿಹಾಯ್ದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿದ್ದಾರೆ.

ಮಂಗಳವಾರ ರಾಜಸ್ಥಾನದ ಟೋಂಕ್‌- ಸವಾಯ್‌ ಮಾಧೋಪುರದಲ್ಲಿ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ ‘ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲಿ ಹನುಮಾನ್‌ ಚಾಲೀಸಾ ಆಲಿಸೋದು ಕೂಡಾ ಅಪರಾಧವಾಗುತ್ತದೆ. ರಾಜಸ್ಥಾನ ಕೂಡಾ ಇಂಥ ಘಟನೆಯಿಂದ ಹೊರತಾಗಿಲ್ಲ. ಜನರು ರಾಮಾ ರಾಮಾ ಎನ್ನುವ ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತವು ರಾಮನವಮಿಯನ್ನು ನಿಷೇಧಿಸಿತ್ತು. ಆದರೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ರಾಮನವಮಿ ಆಚರಿಸಲಾಗುತ್ತಿದೆ, ಶೋಭಾಯಾತ್ರೆ ಕೂಡಾ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಬೆಂಗಳೂರಿಯಲ್ಲಿ ಹಿಂದೂ ಯುವಕನೊಬ್ಬ ತನ್ನ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಹಾಕಿದ್ದ ವೇಳೆ ಕೆಲ ಮುಸ್ಲಿಂ ಯುವಕರು ಆತನ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯನ್ನೇ ಮೋದಿ ರಾಜಸ್ಥಾನದಲ್ಲಿ ಪ್ರಸ್ತಾಪಿಸಿದ್ದಾರೆ.