ಗುಂಟೂರು ಟಿಡಿಪಿ ಅಭ್ಯರ್ಥಿ ಆಸ್ತಿ 5785 ಕೋಟಿ ರು.

| Published : Apr 24 2024, 02:27 AM IST

ಸಾರಾಂಶ

ಆಂಧ್ರಪ್ರದೇಶದಲ್ಲಿ ಈ ಬಾರಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಯುತ್ತಿದ್ದು ಹಲವು ಆಗರ್ಭ ಶ್ರೀಮಂತರು ಕಣಕ್ಕೆ ಇಳಿದಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

ಶ್ರೀಮಂತ ಅಭ್ಯರ್ಥಿಗಳು

ಹೆಸರುಪಕ್ಷಆಸ್ತಿ

ಪಿ.ಚಂದ್ರಶೇಖರ್‌ಟಿಡಿಪಿ5785 ಕೋಟಿ ರು.

ವಿಶ್ವೇಶ್ವರ ರೆಡ್ಡಿಬಿಜೆಪಿ4566 ಕೋಟಿ ರು.

ನಾರಾಯಣಟಿಡಿಪಿ806 ಕೋಟಿ ರು.

ಜಗನ್‌ವೈಎಸ್‌ಆರ್‌ ಕಾಂಗ್ರೆಸ್‌758 ಕೋಟಿ ರು

ನ.ರ.ಲೋಕೇಶ್‌ಟಿಡಿಪಿ542 ಕೋಟಿ ರು.

ಶರ್ಮಿಳಾಕಾಂಗ್ರೆಸ್‌182 ಕೋಟಿ ರು.

ಪವನ್‌ ಕಲ್ಯಾಣ್‌ಜನಸೇನಾ165 ಕೋಟಿ ರ ಉ.

ಹೈದ್ರಾಬಾದ್: ಆಂಧ್ರಪ್ರದೇಶದಲ್ಲಿ ಈ ಬಾರಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಯುತ್ತಿದ್ದು ಹಲವು ಆಗರ್ಭ ಶ್ರೀಮಂತರು ಕಣಕ್ಕೆ ಇಳಿದಿದ್ದು ಎಲ್ಲರ ಗಮನ ಸೆಳೆದಿದ್ದಾರೆ.ಈ ಪೈಕಿ ಗುಂಟೂರು ಲೋಕಸಭಾ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಉದ್ಯಮಿ ಡಾ.ಪಿ. ಚಂದ್ರಶೇಖರ್‌ ತಮ್ಮ ಕುಟುಂಬ 5785 ಕೋಟಿ ರು. ಆಸ್ತಿ ಹೊಂದಿದೆ ಎಂದು ಘೋಷಿಸಿದ್ದಾರೆ. ಈ ಪೈಕಿ ಚಂದ್ರಶೇಖರ್‌ 2316 ಕೋಟಿ ರು. ಮತ್ತು ಅವರ ಪತ್ನಿ ಶ್ರೀರತ್ನ ಬಳಿ 2280 ಕೋಟಿ ರು. ಆಸ್ತಿ ಇದೆ.

ಈ ಆಸ್ತಿಯಲ್ಲಿ 6 ಕೋಟಿ ಮೌಲ್ಯದ ಕಾರುಗಳು, ಬ್ಯಾಂಕಲ್ಲಿ 6 ಕೋಟಿ ರು.ನಗದು, 6.86 ಕೆಜಿ ಚಿನ್ನ, 34 ಕೋಟಿ ರು. ಮೌಲ್ಯದ ಜಮೀನು, ದೆಹಲಿಯಲ್ಲಿ 135 ಕೋಟಿ ರು.ಮೌಲ್ಯದ ಕಟ್ಟಡ, ಅಮೆರಿಕದಲ್ಲಿ 7 ಕೋಟಿ ಮೌಲ್ಯದ ಭೂಮಿ, 29 ಕೋಟಿ ರು. ಮೌಲ್ಯದ ಕಟ್ಟಡ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಒಂದು ವೇಳೆ ಚಂದ್ರಶೇಖರ್‌ ಗೆದ್ದರೆ, ಅತ್ಯಂತ ಶ್ರೀಮಂತ ಸಂಸದರಾಗಿ ಹೊರಹೊಮ್ಮಲಿದ್ದಾರೆ. ಹಾಲಿ ರಾಜ್ಯಸಭಾ ಸದಸ್ಯೆ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾ ಮೂರ್ತಿ 5600 ಕೋಟಿ ರು. ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.ಬಿಜೆಪಿ ಅಭ್ಯರ್ಥಿ:

ಇನ್ನು ಚೆವೆಲ್ಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ರೆಡ್ಡಿ ತಮ್ಮ ಕುಟುಂಬ ಆಸ್ತಿ 4566 ಕೋಟಿ ರು. ಎಂದು ಘೋಷಿಸಿದ್ದಾರೆ.

ಇನ್ನೊಂದೆಡೆ ನೆಲ್ಲೂರು ಕ್ಷೇತ್ರದ ಟಿಡಿಪಿ ಅಭ್ಯರ್ಥಿ ನಾರಾಯಣ ಪೊಂಗುರು 806 ಕೋಟಿ ರು., ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್‌ ರೆಡ್ಡಿ 758 ಕೋಟಿ ರು. ಘೋಷಿಸಿಕೊಂಡಿದ್ದಾರೆ. ಇನ್ನು ಜಗನ್‌ ಸೋದರಿ, ಆಂಧ್ರ ಕಾಂಗ್ರೆಸ್‌ ಅಧ್ಯಕ್ಷೆ ಶರ್ಮಿಳಾ 182 ಕೋಟಿ ರು. ಆಸ್ತಿ ಘೋಷಿಸಿದ್ದಾರೆ. ಮತ್ತೊಂದೆಡೆ ಮಂಗಳಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಟಿಡಿಪಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ನ.ರ.ಲೋಕೇಶ್‌ 542 ಕೋಟಿ ರು. ಆಸ್ತಿ ಘೋಷಿಸಿದ್ದಾರೆ. 2019ರಲ್ಲಿ ಇವರ ಆಸ್ತಿ 373 ಕೋಟಿ ರು.ನಷ್ಟಿತ್ತು. ಇನ್ನು ಪಿಥಾಪುರಂನಿಂದ ಕಣಕ್ಕೆ ಇಳಿದಿರುವ ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್‌ ಕಲ್ಯಾಣ್‌ ತಮ್ಮ ಬಳಿಕ 165 ಕೋಟಿ ರು. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.ಇತ್ತೀಚೆಗೆ ಮುಕ್ತಾಯವಾದ ಮೊದಲ ಹಂತದ ಚುನಾವಣೆಯಲ್ಲಿ ಮಧ್ಯಪ್ರದೇಶದ ಛಿಂದ್ವಾಡಾದ ಕಾಂಗ್ರೆಸ್‌ ಅಭ್ಯರ್ಥಿ ನಕುಲ್‌ನಾಥ್‌ 716 ಕೋಟಿ ರು., ತಮಿಳುನಾಡಿನ ಈರೋಡ್‌ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಅಶೋಕ್‌ ಕುಮಾರ್‌ 662 ಕೋಟಿ ರು., ತಮಿಳುನಾಡಿನ ಶಿವಗಂಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧೀನವಂತನ್‌ ಯಾದವ್‌ 253 ಕೋಟಿ ರು. ಆಸ್ತಿ ಘೋಷಣೆ ಮೂಲಕ ಅತಿ ಹೆಚ್ಚು ಆಸ್ತಿ ಘೋಷಿಸಿಕೊಂಡ ಟಾಪ್‌ 3 ಶ್ರೀಮಂತ ಅಭ್ಯರ್ಥಿಗಳು ಎನ್ನಿಸಿಕೊಂಡಿದ್ದರು.