ಸಾರಾಂಶ
ಕಳ್ಳಬಟ್ಟಿ ದುರಂತದಲ್ಲಿ ಸಾವು ಸಂಭವಿಸಿದರೆ, ಅಕ್ರಮ ಮದ್ಯ ಮಾರಾಟ ಮಾಡಿದವರಿಗೆ ಜೀವಾವಧಿ ಶಿಕ್ಷೆ ಮತ್ತು ಭಾರೀ ದಂಡ ವಿಧಿಸುವ ಕಠಿಣ ಕಾನೂನನ್ನು ತಮಿಳುನಾಡು ಸರ್ಕಾರ ಜಾರಿಗೆ ತಂದಿದೆ.
ಚೆನ್ನೈ: ಕಳ್ಳಬಟ್ಟಿ ದುರಂತದಲ್ಲಿ ಸಾವು ಸಂಭವಿಸಿದರೆ, ಅಕ್ರಮ ಮದ್ಯ ಮಾರಾಟ ಮಾಡಿದವರಿಗೆ ಜೀವಾವಧಿ ಶಿಕ್ಷೆ ಮತ್ತು ಭಾರೀ ದಂಡ ವಿಧಿಸುವ ಕಠಿಣ ಕಾನೂನನ್ನು ತಮಿಳುನಾಡು ಸರ್ಕಾರ ಜಾರಿಗೆ ತಂದಿದೆ. ಕಲ್ಲಕುರಿಚಿ ಕಳ್ಳಬಟ್ಟಿ ದುರಂತದಲ್ಲಿ 60 ಮಂದಿ ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಸರ್ಕಾರ, ಮದ್ಯ ನಿಷೇಧ ಕಾನೂನನ್ನು ಕಠಿಣಗೊಳಿಸಿದೆ.ತಮಿಳುನಾಡು ನಿಷೇಧ ಕಾಯ್ದೆ 1937ರ ತಿದ್ದುಪಡಿ ಮಾಡಿರುವ ಸರ್ಕಾರ, ಜೀವಕ್ಕೆ ಅಪಾಯವನ್ನುಂಟು ಮಾಡುವ ಅಕ್ರಮ ಮದ್ಯ ತಯಾರಿಕೆ, ಸ್ವಾಧೀನ ಮತ್ತು ಮಾರಾಟ ಮಾಡುವವರಿಗೆ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚು ಮಾಡಿದ.
ತಿದ್ದುಪಡಿಯ ಪ್ರಕಾರ ಈ ಅಕ್ರಮದಲ್ಲಿ ತೊಡಗಿಕೊಳ್ಳುವ ಅಪರಾಧಿಗಳಿಗೆ ಗರಿಷ್ಠ 10 ವರ್ಷಗಳವರೆಗೆ ಕಠಿಣ ಸೆರೆವಾಸ ಶಿಕ್ಷೆ ಮತ್ತು 5 ಲಕ್ಷದವರೆಗೆ ದಂಡವನ್ನು ವಿಧಿಸಲಾಗಿದೆ. ಒಂದು ವೇಳೆ ದುರಂತದಲ್ಲಿ ಸಾವು ಸಂಭವಿಸಿದರೆ ಇದಕ್ಕೆ ಕಾರಣವಾಗುವ ವ್ಯಕ್ತಿಗಳಿಗೆ 10 ಲಕ್ಷ ಮೇಲ್ಪಟ್ಟ ದಂಡ ಜೊತೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವುದಾಗಿ ತಿದ್ದುಪಡಿ ಮಾಡಲಾಗಿದೆ.