ಹೆಚ್‌ಎಎಲ್‌ ಸೇರಿ ಮೂರು ಕಂಪನಿಗಳ ಜೊತೆ ಸೇನೆ ₹39125 ಕೋಟಿ ಒಪ್ಪಂದ

| Published : Mar 02 2024, 01:47 AM IST

ಸಾರಾಂಶ

ಹೆಚ್‌ಎಎಲ್‌, ಲಾರ್ಸೆನ್‌ ಅಂಡ್‌ ಟರ್ಬೊ ಮತ್ತು ಬ್ರಹ್ಮೋಸ್ ಸಂಸ್ಥೆಗಳೊಂದಿಗೆ ರಕ್ಷಣಾ ಇಲಾಖೆ 39,125 ಕೋಟಿ ರು. ಮೌಲ್ಯದ 5 ಒಪ್ಪಂದಗಳನ್ನು ಮಾಡಿಕೊಂಡಿದೆ.

ನವದೆಹಲಿ: ಬೆಂಗಳೂರಿನ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌(ಹೆಚ್‌ಎಎಲ್‌) ಸೇರಿದಂತೆ ದೇಶದ ಪ್ರಮುಖ ಮೂರು ಕಂಪನಿಗಳಿಂದ ರಕ್ಷಣಾ ಉಪಕರಣಗಳ ಖರೀದಿಗೆ ರಕ್ಷಣಾ ಸಚಿವಾಲಯವು 39,125 ಕೋಟಿ ರು. ಮೌಲ್ಯದ ಐದು ಒಪ್ಪಂದಗಳನ್ನು ಮಾಡಿಕೊಂಡಿದೆ.

ಪ್ರಮುಖವಾಗಿ ಹೆಚ್‌ಎಎಲ್‌ನಿಂದ ಮಿಗ್‌-29 ವಿಮಾನಗಳಿಗೆ ಎಂಜಿನ್‌ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ.

ಹಾಗೆಯೇ ಲಾರ್ಸೆನ್‌ ಅಂಡ್‌ ಟರ್ಬೋ ಕಂಪನಿಯ ಜೊತೆಗೆ ಸಿಐಡಬ್ಲ್ಯೂಎಸ್‌ ಶಸ್ತ್ರಾಸ್ತ್ರ ಮತ್ತು ಸುಸಜ್ಜಿತ ರಾಡಾರ್‌ ಪೂರೈಸುವ ಎರಡು ಒಪ್ಪಂದಕ್ಕೆ ಅಂಕಿತ ಹಾಕಿದೆ.

ಅಲ್ಲದೆ ಬ್ರಹ್ಮೋಸ್‌ ಏರೋಸ್ಪೇಸ್‌ ಕಂಪನಿಯ ಜೊತೆಗೆ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಪೂರೈಸುವ ಸಂಬಂಧ ಎರಡು ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಂಡಿದೆ.