ಪಿಚೈ, ನಾದೆಳ್ಲ ಸೇರಿ ಟೆಕ್ ಸಿಇಒಗಳಿಗೆ ಟ್ರಂಪ್ ಔತಣ

| Published : Sep 06 2025, 01:00 AM IST

ಪಿಚೈ, ನಾದೆಳ್ಲ ಸೇರಿ ಟೆಕ್ ಸಿಇಒಗಳಿಗೆ ಟ್ರಂಪ್ ಔತಣ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಸೇರಿದಂತೆ ಪ್ರಭಾವಿ ಟೆಕ್‌ ಸಿಇಒಗಳಿಗೆ ಗುರುವಾರ ಔತಣಕೂಟ ಹಮ್ಮಿಕೊಂಡರು.

ಪಿಟಿಐ ವಾಷಿಂಗ್ಟನ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಸೇರಿದಂತೆ ಪ್ರಭಾವಿ ಟೆಕ್‌ ಸಿಇಒಗಳಿಗೆ ಗುರುವಾರ ಔತಣಕೂಟ ಹಮ್ಮಿಕೊಂಡರು. ಈ ವೇಳೆ. ‘ಈ ಉನ್ನತ ಐಕ್ಯೂ ಗುಂಪು ಅಮೆರಿಕ ವಾಣಿಜ್ಯೋದ್ಯಮದಲ್ಲಿ ಕ್ರಾಂತಿ ನಡೆಸಲಿದೆ ಹಾಗೂ ಅದನ್ನು ಮುನ್ನಡೆಲಿದೆ’ ಎಂದರು. ಭಾರತ, ಚೀನಾ, ರಷ್ಯಾ ಸೇರಿ ಹಲವು ದೇಶಗಳ ನಡುವೆ ಟ್ರಂಪ್ ಸಂಘರ್ಷಕ್ಕಿಳಿದಾಗಲೇ ಈ ಸಭೆ ಆಯೋಜಿಸಿದ್ದುದು ವಿಶೇಷ.

ಔತಣದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌, ಆ್ಯಪಲ್ ಸಿಇಒ ಟಿಮ್ ಕುಕ್ , ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್‌ ಕೂಡ ಇದ್ದರು. ಈ ವೇಳೆ, ಪಿಚೈ, ನಾದೆಳ್ಲ ಸೇರಿ ಎಲ್ಲರೂ ಅಮೆರಿಕದ ಆರ್ಥಿಕತೆಗೆ ತಮ್ಮ ದೇಶ ನೀಡುತ್ತಿರುವ ಕೊಡುಗೆ ವಿವರಿಸಿದರು.

ಆದರೆ ಟೆಸ್ಲಾ ಮುಖ್ಯಸ್ಥ ಹಾಗೂ ಟ್ರಂಪ್‌ ಮಾಜಿ ಮಿತ್ರ ಎಲಾನ್‌ ಮಸ್ಕ್‌ಗೆ ಔತಣಕ್ಕೆ ಆಹ್ವಾನವಿರಲಿಲ್ಲ.