ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದ ದೆಹಲಿ ಚುನಾವಣೆಯ ಬಹಿರಂಗಪ್ರಚಾರಕ್ಕೆ ಇಂದು ಸಂಜೆ ತೆರೆ

| N/A | Published : Feb 02 2025, 11:46 PM IST / Updated: Feb 03 2025, 04:57 AM IST

ಸಾರಾಂಶ

 ಆಪ್‌, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದ, ಮೂರೂ ಪಕ್ಷಗಳಿಂದ ಭರ್ಜರಿ ಉಚಿತ ಕೊಡುಗೆಗಳ ಘೋಷಣೆಗಳು ಮೊಳಗಿದ ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಫೆ.3ರ ಸೋಮವಾರ ತೆರೆ ಬೀಳಲಿದೆ.

ನವದೆಹಲಿ: ಆಪ್‌, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದ, ಮೂರೂ ಪಕ್ಷಗಳಿಂದ ಭರ್ಜರಿ ಉಚಿತ ಕೊಡುಗೆಗಳ ಘೋಷಣೆಗಳು ಮೊಳಗಿದ ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಫೆ.3ರ ಸೋಮವಾರ ತೆರೆ ಬೀಳಲಿದೆ.

ಮಂಗಳವಾರ ಸಂಜೆವರೆಗೂ ರಾಜಕೀಯ ಪಕ್ಷಗಳಿಗೆ ಮನೆಮನೆಗೆ ತೆರಳಿ ಪ್ರಚಾರಕ್ಕೆ ಅವಕಾಶವಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆ.5ರ ಬುಧವಾರ ಮತದಾನ ನಡೆಯಲಿದೆ. ಫೆ.8ರಂದು ಮತ ಎಣಿಕೆ ನಡೆಯಲಿದೆ. 1.5 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.

ಒಂದು ಕಡೆ ಆಮ್‌ ಆದ್ಮಿ ಪಕ್ಷ ಸತತ 3ನೇ ಬಾರಿ ಅಧಿಕಾರದ ಗದ್ದುಗೆಗೆ ಏರಲು ಹವಣಿಸುತ್ತಿದ್ದರೆ, ದೇಶದ ಅತಿದೊಡ್ಡ ಪಕ್ಷವಾದ ಬಿಜೆಪಿ ಬರೋಬ್ಬರಿ 27 ವರ್ಷಗಳ ನಂತರ ದೆಹಲಿ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ಳುವ ತವಕದಲ್ಲಿದೆ.

ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಪ್‌ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರು ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಮಾಜಿ ಸಂಸದ ಪರ್ವೇಶ್‌ ಸಾಹಿಬ್‌ ಸೊಂಗ್‌ ವರ್ಮಾ ಅವರ ವಿರುದ್ಧ ಕಣಕ್ಕಿಳಿದಿದ್ದಾರೆ. ಅಂತೆಯೇ, ಕಲ್ಕಾಜಿ ಕ್ಷೇತ್ರದಲ್ಲಿ ಸಿಎಂ ಆತಿಶಿ ಅವರ ವಿರುದ್ಧ ಬಿಜೆಪಿ ಮಾಜಿ ಸಂಸದ ರಮೇಶ್‌ ಬಿಧೂರಿ ಸ್ಪರ್ಧಿಸಲಿದ್ದಾರೆ.