ಸಾರಾಂಶ
ನವದೆಹಲಿ : ಕಾಂಗ್ರಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ತಿರುವನಂತಪುರದಿಂದ ದಿಲ್ಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಪ್ರಕ್ಷುಬ್ಧತೆ ಹಾಗೂ ತಾಂತ್ರಿಕ ಸಮಸ್ಯೆಗೆ ಗುರಿಯಾಗಿ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
‘ಆದರೆ ಭೂಸ್ಪರ್ಶಕ್ಕೂ ಮುನ್ನ ಅದೇ ರನ್‌ವೇನಲ್ಲಿ ಇನ್ನೊಂದು ವಿಮಾನ ಇತ್ತು. ಅದರೂ ವಿಮಾನ ಲ್ಯಾಂಡಿಂಗ್‌ಗೆ ಯತ್ನ ನಡೆಸಿತ್ತು. ಆದರೆ ಪೈಲಟ್ ಕೂಡಲೇ ಮತ್ತೆ ಮೇಲೆ ವಿಮಾನ ಹಾರಿಸಿದ. ಹೀಗಾಗಿ ಅನಾಹುತ ತಪ್ಪಿತು. ಬಳಿಕ ಗಂಟೆಗಟ್ಟಲೆ ಆಗಸದಲ್ಲೇ ಗಿರಕಿ ಹೊಡೆದು 2ನೇ ಯತ್ನದಲ್ಲಿ ನಂತರ ವಿಮಾನ ಲ್ಯಾಂಡ್ ಆಯಿತು’ ಎಂದು
ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
ಆದರೆ ಏರ್ ಇಂಡಿಯಾ ಈ ಹೇಳಿಕೆಯನ್ನು ನಿರಾಕರಿಸಿದೆ. ‘ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿತು ಹಾಗೂ ಹವಾಮಾನ ವೈಪರಿತ್ಯ ಉಂಟಾಯಿತು. ಹೀಗಾಗಿ ವಿಮಾನ ಚೆನ್ನೈನಲ್ಲಿ ಭೂಸ್ಪರ್ಶ ಮಾಡಬೇಕಾಯಿತು. ಲ್ಯಾಂಡಿಂಗ್ ವೇಳೆ ಇನ್ನೊಂದು ವಿಮಾನ ಇರಲಿಲ್ಲ. ಎಟಿಸಿ ಸೂಚನೆಯಂತೆ ವಿಮಾನವನ್ನು ಆಗಸದಲ್ಲೇ ಗಿರಕಿ ಹೊಡೆಸಿ, ಅದು ಸೂಚಿಸಿದಾಗ ಇಳಿಸಲಾಯಿತು’ ಎಂದು ಸ್ಪಷ್ಟಪಡಿಸಿದೆ.
ಇದೇ ವೇಳೆ, ‘ವೇಣು ಹೇಳಿಕೆಯನ್ನು ಏರ್ ಇಂಡಿಯಾ ನಿರಾಕರಿಸಿದೆ. ಅವರ ಹೇಳಿಕೆ ಸುಳ್ಳಾದರೆ ವೇಣು ಕ್ಷಮೆ ಯಾಚಿಸಬೇಕು. ಪರಿಣಾಮ ಎದುರಿಸಬೇಕು’ ಎಂದು ಹೇಳಿದೆ.