ಭದ್ರತಾ ಅನುಮತಿ ರದ್ದು ಪ್ರಶ್ನಿಸಿದ್ದ ಟರ್ಕಿಯ ಸೆಲಿಬಿ ಸಂಸ್ಥೆ ಅರ್ಜಿ ವಜಾ

| N/A | Published : Jul 07 2025, 11:48 PM IST / Updated: Jul 08 2025, 04:48 AM IST

ಭದ್ರತಾ ಅನುಮತಿ ರದ್ದು ಪ್ರಶ್ನಿಸಿದ್ದ ಟರ್ಕಿಯ ಸೆಲಿಬಿ ಸಂಸ್ಥೆ ಅರ್ಜಿ ವಜಾ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರತಾ ಕ್ಷೇತ್ರದಲ್ಲಿ ದೇಶ ಎದುರಿಸುತ್ತಿರುವ ಸವಾಲು  ಮತ್ತು  ಭೌಗೋಳಿಕ-ರಾಜಕೀಯ ಮೇಲಾಟಗಳಿಂದ  ನಡೆದ ಕಹಿಘಟನೆಗಳ ಹಿನ್ನೆಲೆಯಲ್ಲಿ, ಟರ್ಕಿಯ ಸೆಲೆಬಿ ಏವಿಯೇಷನ್ಸ್‌ಗೆ ಭಾರತದಲ್ಲಿ ಕಾರ್ಯಾಚರಿಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.

 

ನವದೆಹಲಿ: ಭದ್ರತಾ ಕ್ಷೇತ್ರದಲ್ಲಿ ದೇಶ ಎದುರಿಸುತ್ತಿರುವ ಸವಾಲುಗಳು ಮತ್ತು ಕೆಲ ಭೌಗೋಳಿಕ-ರಾಜಕೀಯ ಮೇಲಾಟಗಳಿಂದ ಇತ್ತೀಚೆಗೆ ನಡೆದ ಕಹಿಘಟನೆಗಳ ಹಿನ್ನೆಲೆಯಲ್ಲಿ, ಟರ್ಕಿಯ ಸೆಲೆಬಿ ಏವಿಯೇಷನ್ಸ್‌ಗೆ ಭಾರತದಲ್ಲಿ ಕಾರ್ಯಾಚರಿಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.

‘ದೇಶದ ನಾಗರಿಕ ವಿಮಾನಯಾನ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆಗಳನ್ನು ಸಂಪೂರ್ಣವಾಗಿ ತಪ್ಪಿಸಲು ಅಧಿಕಾರಿಗಳು ತ್ವರಿತ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳುವುದು ಸಮರ್ಥನೀಯ. ಭದ್ರತಾ ಕ್ಷೇತ್ರದಲ್ಲಿ ದೇಶವು ಸಮಕಾಲೀನ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಮತ್ತು ಭೌಗೋಳಿಕ-ರಾಜಕೀಯ ಮೇಲಾಟಗಳಿಂದ ಇತ್ತೀಚೆಗಷ್ಟೇ ಸಮಸ್ಯೆ ಉಂಟಾಗಿರುವುದರಿಂದ ಈ ಕ್ರಮ ಸರಿಯಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಟರ್ಕಿ ಮೂಲದ ಸೆಲೆಬಿ ಏವಿಯೇಷನ್ಸ್‌ ಭಾರತದ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಪಾಕ್‌ ಜತೆಗಿನ ಸಂಘರ್ಷದ ವೇಳೆ ವೈರಿ ರಾಷ್ಟ್ರಕ್ಕೆ ಟರ್ಕಿಯು ಪರೋಕ್ಷ  ಬೆಂಬಲ ನೀಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಆತಂಕದ ದೃಷ್ಟಿಯಿಂದ ಸೆಲೆಬಿಗೆ ನೀಡಲಾಗಿದ್ದ ಪರವಾನಗಿಯನ್ನು ರದ್ದು ಮಾಡಲಾಗಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಸೆಲೆಬಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಸೆಲೆಬಿ ಸಂಸ್ಥೆಗೆ ಭಾರೀ ಹಿನ್ನಡೆಯಾದಂತಾಗಿದೆ.

  • ಪಾಕ್ ಜತೆಗಿನ ಸಂಘರ್ಷದ ವೇಳೆ ಶತ್ರುದೇಶಕ್ಕೆ ಟರ್ಕಿ ನೆರವು
  • ಭದ್ರತಾ ದೃಷ್ಟಿಯಿಂದ ಸೆಲೆಬಿ ಅನುಮತಿ ರದ್ದುಪಡಿಸಿದ್ದ ಕೇಂದ್ರ
  • ಟರ್ಕಿ ಮೂಲದ ಸೆಲೆಬಿ ಏವಿಯೇಷನ್ಸ್‌ ಭಾರತದ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು
  • ಪಾಕ್‌ ಜತೆಗಿನ ಸಂಘರ್ಷದ ವೇಳೆ ವೈರಿ ರಾಷ್ಟ್ರಕ್ಕೆ ಟರ್ಕಿಯು ಪರೋಕ್ಷ ಬೆಂಬಲ
  • ಕೇಂದ್ರ ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಸೆಲೆಬಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು
  • ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಸೆಲೆಬಿ ಸಂಸ್ಥೆಗೆ ಭಾರೀ ಹಿನ್ನಡೆ

Read more Articles on