ಸಾರಾಂಶ
ಪಾಕ್ ಬೆಂಬಲಕ್ಕೆ ನಿಂತಿದ್ದ ಟರ್ಕಿಗೆ ಸಡ್ಡು ಹೊಡೆದಿದ್ದ ಭಾರತ ಸರ್ಕಾರ ಇತ್ತೀಚೆಗೆ ಟರ್ಕಿ ಮೂಲದ ಕಂಪನಿ ಸೆಲೆಬಿಗೆ ಭಾರತದ ವಿಮಾನ ನಿಲ್ದಾಣದಲ್ಲಿನ ಸೇವಾ ಅನುಮತಿ ರದ್ದು ಮಾಡಿತ್ತು.
ನವದೆಹಲಿ: ಪಾಕ್ ಬೆಂಬಲಕ್ಕೆ ನಿಂತಿದ್ದ ಟರ್ಕಿಗೆ ಸಡ್ಡು ಹೊಡೆದಿದ್ದ ಭಾರತ ಸರ್ಕಾರ ಇತ್ತೀಚೆಗೆ ಟರ್ಕಿ ಮೂಲದ ಕಂಪನಿ ಸೆಲೆಬಿಗೆ ಭಾರತದ ವಿಮಾನ ನಿಲ್ದಾಣದಲ್ಲಿನ ಸೇವಾ ಅನುಮತಿ ರದ್ದು ಮಾಡಿತ್ತು. ಇದರ ಬೆನ್ನಲ್ಲೇ ಕಂಪನಿಯ ಷೇರು ಮಾರುಕಟ್ಟೆ ಬಂಡವಾಳ 1700 ಕೋಟಿ ರು.ನಷ್ಟು ಕುಸಿದಿದೆ ಎಂದು ತಿಳಿದುಬಂದಿದೆ ಹಾಗೂ ನೌಕರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ನಡುವೆ, ಅನುಮತಿ ರದ್ದು ವಿರುದ್ಧ ಕಂಪನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಸೋಮವಾರ ಈ ಪ್ರಕರಣದ ವಿಚಾರಣೆ ಅಪೂರ್ಣಗೊಂಡ ಕಾರಣ ಪ್ರಕರಣದ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಲಾಗಿದೆ.ಸೆಲೆಬಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರಸ್ತೋಗಿ, ‘ಕೇವಲ ಸಾರ್ವಜನಿಕರ ಅಭಿಪ್ರಾಯವ್ನಾಧರಿಸಿ ಸೆಲೆಬಿಯ ಸೇವೆ ರದ್ದುಗೊಳಿಸಲಾಗುವುದಿಲ್ಲ. ಕಂಪನಿಯು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಅದರಿಂದ ರಾಷ್ಟ್ರೀಯ ಭದ್ರತೆಗೆ ಹೇಗೆ ಧಕ್ಕೆಯಾಗಿದೆ ಎಂಬುದನ್ನು ಸರ್ಕಾರ ಸಿದ್ಧಪಡಿಸಬೇಕು’ ಎಂದರು.