ಸಾರಾಂಶ
ಆಪ್ ಶಾಸಕರನ್ನು ಹಣ ಕೊಟ್ಟು ಬಿಜೆಪಿ ಖರೀದಿಸಲು ಯತ್ನಿಸುತ್ತಿದೆ ಎಂದು ಹೇಳಿಕೆ ನೀಡಿದ ಸಂಬಂಧ ಸಚಿವೆ ಅತಿಷಿಗೂ ಪೊಲೀಸ್ ನೋಟಿಸ್ ನೀಡಲಾಗಿದೆ.
ನವದೆಹಲಿ: 25 ಕೋಟಿ ರು. ನೀಡಿ 7 ಆಪ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಪ್ ನೇತಾರ ಅರವಿಂದ ಕೇಜ್ರಿವಾಲ್ ಅವರಿಗೆ ನೋಟಿಸ್ ನಿಡಿದ ಬೆನ್ನಲ್ಲೇ ದಿಲ್ಲಿ ಆಪ್ ನಾಯಕಿ ಹಾಗೂ ಸಚಿವೆ ಆತಿಶಿ ಮಲ್ರೇಣಾ ಅವರಿಗೂ ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರಿಗೆ ಫೆ.5ರೊಳಗೆ ನಿಖರ ಮಾಹಿತಿ ನೀಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.ಶಾಸಕರ ಖರೀದಿ ಬಗ್ಗೆ ಆಪ್ ಮಾಡಿದ ಆರೋಪ ಸುಳ್ಳು ಎಂದು ಬಿಜೆಪಿ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೇ ಪ್ರಕರಣ ಸಂಬಂಧ ಈಗಾಗಲೇ ದೆಹಲಿ ಸಿಎಂಗೂ ನೋಟಿಸ್ ನೀಡಲಾಗಿದೆ.