ಅನುಮತಿ ನಿರಾಕರಣೆ ಹೊರತಾಗಿಯೂ ಶುಕ್ರವಾರ ದೆಹಲಿಯಲ್ಲಿ ‘ಲೆಹರಾದೋ ತಿರಂಗಾ’ ಹೆಸರಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕಾರಣಕ್ಕೆ ಪೊಲೀಸರು ಬಂಧಿಸಿದ್ದ ಜಿರಳೆ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ನವದೆಹಲಿ: ಅನುಮತಿ ನಿರಾಕರಣೆ ಹೊರತಾಗಿಯೂ ಶುಕ್ರವಾರ ದೆಹಲಿಯಲ್ಲಿ ‘ಲೆಹರಾದೋ ತಿರಂಗಾ’ ಹೆಸರಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕಾರಣಕ್ಕೆ ಪೊಲೀಸರು ಬಂಧಿಸಿದ್ದ ಜಿರಳೆ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ, ವಶದಲ್ಲಿದ್ದ ಎಐಎಸ್‌ಎ ಸಂಘಟನೆ ನಾಯಕಿ ನೇಹಾ ಬೋರಾರನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ನೇಹಾರನ್ನು ಶನಿವಾರ ಬೆಳಗ್ಗೆಯೇ ಬಿಡುಗಡೆ ಮಾಡಲಾಗಿದ್ದರೆ, ದೀಪ್ಕೆಯನ್ನು ಶನಿವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಮುಂದಿನ 1 ವರ್ಷ ಕಾಲ ಶಾಂತಿ ಕಾಪಾಡುವ ‘ಶಾಂತಿ ಮುಚ್ಚಳಿಕೆ’ ಬರೆದುಕೊಟ್ಟ ಬಳಿಕ ಬಿಡುಗಡೆ ಮಾಡಲಾಗಿದೆ.

ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ

ಪೊಲೀಸರ ವಶದಿಂದ ಬೆಳ್ಳಂಬೆಳಗ್ಗೆ ಬಿಡುಗಡೆಯಾಗುತ್ತಿದ್ದಂತೆ ನೇಹಾ ಬೋರಾ ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.

ನನ್ನನ್ನು ಮಂಡಿ ಹೌಸ್‌ನಲ್ಲಿ ರಾತ್ರಿಯಿಂದ ಮುಂಜಾನೆ 5 ಗಂಟೆ ವರೆಗೆ ಇರಿಸಲಾಗಿತ್ತು. ನನ್ನನ್ನು ಅಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ವಶಕ್ಕೆ ಪಡೆಯುವ ಇಂಥ ಘಟನೆಗಳು ದೇಶದಲ್ಲಿ ಹಲವು ಸಮಯದಿಂದ ನಡೆಯುತ್ತಿದ್ದು, ನಮ್ಮ ಚಳವಳಿಯಿಂದಾಗಿ ಇವುಗಳು ಈಗ ಬೆಳಕಿಗೆ ಬಂದಿವೆ ಎಂದು ಹೇಳಿದ್ದಾರೆ. ಜತೆಗೆ, ಎಲ್ಲಾ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡುವಂತೆಯೂ ಆಗ್ರಹಿಸಿದ್ದಾರೆ.

ಇದೇ ವೇಳೆ ಎಐಎಸ್‌ಎಯು ಕೂಡ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆ ಮತ್ತು ಎಸ್‌ಐಆರ್‌ ಪ್ರಕ್ರಿಯೆ ಹಿಂಪಡೆಯುವ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದೆ.

2ನೇ ಬಾಂಡ್‌:

ಈ ನಡುವೆ ದೀಪ್ಕೆಯನ್ನು ಎರಡನೇ ಬಾರಿ ಶಾಂತಿ ಬಾಂಡ್‌ ಬರೆಸಿಕೊಂಡು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಶಾಂತಿ ಬಾಂಡ್‌ನಡಿ 50000 ರು. ಶ್ಯೂರಿಟಿಯ ಬಾಂಡ್‌ ಜೊತೆಗೆ ಮುಂದಿನ ಒಂದು ವರ್ಷ ಕಾಲ ಶಾಂತಿ ಕಾಪಾಡುವ ಮತ್ತು ಉತ್ತಮ ನಡವಳಿಕೆ ತೋರುವ ಭರವಸೆಯನ್ನು ದೀಪ್ಕೆ ನೀಡಿದ್ದಾರೆ.