ದಿಲ್ಲಿಯ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ಗೆ ಬಾಂಬ್ ಬೆದರಿಕೆ: ಮಕ್ಕಳಲ್ಲಿ ಆತಂಕ

| Published : Feb 03 2024, 01:47 AM IST

ದಿಲ್ಲಿಯ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ಗೆ ಬಾಂಬ್ ಬೆದರಿಕೆ: ಮಕ್ಕಳಲ್ಲಿ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿಯ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನ ಇಮೇಲ್‌ಗೆ ಬಾಂಬ್‌ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸಿ ಬಾಂಬ್‌ ಕುರಿತು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ನವದೆಹಲಿ: ಇತ್ತೀಚೆಗೆ ನಕಲಿ ಬಾಂಬ್‌ ಕರೆಗಳ ಹಾವಳಿ ಹೆಚ್ಚಾಗಿದ್ದು, ಶುಕ್ರವಾರ ದೆಹಲಿಯ ಆರ್‌.ಕೆ.ಪುರಂನಲ್ಲಿನ ಡೆಲ್ಲಿ ಪಬ್ಲಿಕ್‌ ಶಾಲೆಗೆ ಅನಾಮಿಕ ವ್ಯಕ್ತಿಗಳು ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 9 ಗಂಟೆ ವೇಳೆಗೆ ಶಾಲೆಯ ಇ ಮೇಲ್‌ 2 ಬಾಂಬ್‌ ಇದೆ ಎಂದು ಸಂದೇಶ ಬಂದಿದ್ದು, ಇದನ್ನು ಸೂಕ್ಷ್ಮವಾಗಿ ಪರಿಗಣಿಸಿದ ಸಿಬ್ಬಂದಿ ಕೂಡಲೇ ಆತಂಕಿತ ಮಕ್ಕಳನ್ನು ಶಾಲೆಯಿಂದ ಮನೆಗೆ ಕಳುಹಿಸಿದರು. ಬಳಿಕ ಪೊಲೀಸರ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಶಾಲೆ ಹಾಗೂ ಹಾಸ್ಟೆಲ್‌ನನ್ನು ಸಂಪೂರ್ಣ ತಪಾಸಣೆ ನಡೆಸಿದ ಬಳಿಕ ಇದು ನಕಲಿ ಕರೆ ಎಂದು ಖಾತರಿಪಟ್ಟಿತು.ಘಟನೆ ಸಂಬಂಧ ಇಮೇಲ್‌ ಕಳುಹಿಸಿದವನಿಗೆ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.