ಸಾರಾಂಶ
ಕಳೆದೊಂದು ವಾರದಿಂದ ಗಂಭೀರ ವಾಯುಮಾಲಿನ್ಯದ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗುರುವಾರ ವಾಯುಗುಣಮಟ್ಟ ಕೊಂಚ ಸುಧಾರಿಸಿದೆ.
ನವದೆಹಲಿ: ಕಳೆದೊಂದು ವಾರದಿಂದ ಗಂಭೀರ ವಾಯುಮಾಲಿನ್ಯದ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗುರುವಾರ ವಾಯುಗುಣಮಟ್ಟ ಕೊಂಚ ಸುಧಾರಿಸಿದೆ. ಆದರೂ ಅತ್ಯಂತ ಕಳಪೆ ಗುಣಮಟ್ಟದಲ್ಲೇ ಮುಂದುವರೆದಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ವಾಯುಗುಣಮಟ್ಟ 376 (ಎಕ್ಯುಐ) ಇದ್ದು, ತಾಪಮಾನ 10.2 ಡಿ.ಸೆ. ದಾಖಲಾಗಿದೆ. ಅಂತೆಯೇ, ಮಂಜು ಮುಸುಕಿದ ವಾತಾವರಣ ಮುಂದುವರೆಯುವ ಮುನ್ಸೂಚನೆ ನೀಡಲಾಗಿದೆ.
ಭಾನುವಾರ ಮಾಲಿನ್ಯ ಮಿತಿಮೀರಿದ್ದ ಕಾರಣ ಅದನ್ನು ನಿಯಂತ್ರಿಸುವ ಸಲುವಾಗಿ 4ನೇ ಹಂತದ ಗ್ರಾಪ್ ಅನ್ನು ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿತ್ತು. ಅದಾಗಿಯೂ 500ರ ಅಂಚಿಗೆ ಹೋಗಿದ್ದ ಎಕ್ಯುಐ ಇದೀಗ ಕೊಂಚ ಇಳಿಕೆಯಾಗಿದೆ.