ಸೊಳ್ಳೆ ಕಡಿತದಿಂದ ಉಂಟಾಗುವ ಡೆಂಘೀ ರೋಗಕ್ಕೆ ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಮದ್ದು ಅಥವಾ ಲಸಿಕೆ ಇರಲಿಲ್ಲ. ಆದರೆ ಇದೀಗ ಜಪಾನ್‌ ಮೂಲದ ತಕೇಡಾ ಕಂಪನಿ ಉತ್ಪಾದಿತ ‘ಕ್ಯುಡೆಂಗಾ’ ಲಸಿಕೆಯು ಆದಷ್ಟು ಬೇಗ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ

ನವದೆಹಲಿ: ಸೊಳ್ಳೆ ಕಡಿತದಿಂದ ಉಂಟಾಗುವ ಡೆಂಘೀ ರೋಗಕ್ಕೆ ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಮದ್ದು ಅಥವಾ ಲಸಿಕೆ ಇರಲಿಲ್ಲ. ಆದರೆ ಇದೀಗ ಜಪಾನ್‌ ಮೂಲದ ತಕೇಡಾ ಕಂಪನಿ ಉತ್ಪಾದಿತ ‘ಕ್ಯುಡೆಂಗಾ’ ಲಸಿಕೆಯು ಆದಷ್ಟು ಬೇಗ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, ಇದರ ಆಮದಿಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ(ಸಿಡಿಎಸ್‌ಸಿಒ) ಒಪ್ಪಿಗೆಯೊಂದೇ ಬಾಕಿ ಇದೆ. ಇದಕ್ಕೆ ಈಗಾಗಲೇ ಸಂಸ್ಥೆಯು ಶಿಫಾರಸು ಮಾಡಿದೆ.

ತಕೇಡಾದ ಈ ಲಸಿಕೆಯ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಕೂಡ ಒಪ್ಪಿಗೆ

ತಕೇಡಾದ ಈ ಲಸಿಕೆಯ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಕೂಡ ಒಪ್ಪಿಗೆ ನೀಡಿದ್ದು, ಯುರೋಪಿಯನ್‌ ಯೂನಿಯನ್‌, ಬ್ರಿಟನ್‌ ಸೇರಿದಂತೆ 41 ದೇಶಗಳಲ್ಲಿ ಬಳಕೆಯಲ್ಲಿದೆ. ಇದು ಸದ್ಯ ವಿಶ್ವದಲ್ಲಿರುವ ಡೆಂಘೀ ವಿರುದ್ಧದ ಏಕೈಕ ಯಶಸ್ವಿ ವ್ಯಾಕ್ಸಿನ್‌ ಆಗಿದೆ.

ಡೆಂಘೀಯನ್ನು ತಡೆಗಟ್ಟುವಲ್ಲಿ ಶೇ.64ರಷ್ಟು ಯಶಸ್ವಿ

ಈ ಲಸಿಕೆಯು ಡೆಂಘೀಯನ್ನು ತಡೆಗಟ್ಟುವಲ್ಲಿ ಶೇ.64ರಷ್ಟು ಯಶಸ್ವಿಯಾಗಿದೆ. 4-60 ವರ್ಷದವರಿಗೆ ನೀಡಬಹುದಾದ ಇದು ಭಾರತದಲ್ಲೂ ಲಭ್ಯವಾದರೆ, ಡೆಂಘೀಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಸದ್ಯ ದೇಶದಲ್ಲಿ ವಾರ್ಷಿಕ 200ಕ್ಕೂ ಹೆಚ್ಚು ಮಂದಿ ಡೆಂಘಿಗೆ ಬಲಿಯಾಗುತ್ತಿದ್ದಾರೆ.

ಈಗಾಗಲೇ ಕ್ಯುಡೆಂಗಾ ಲಸಿಕೆಯ 2.4 ಕೋಟಿ ಡೋಸ್‌ಗಳನ್ನು ವಿಶ್ವಾದ್ಯಂತ ನೀಡಲಾಗಿದ್ದು, ಪಡೆದ ಯಾರಲ್ಲೂ ಗಂಭೀರ ಅಡ್ಡಪರಿಣಾಗಳು ಕಂಡುಬಂದಿಲ್ಲ. ಭಾರತದಲ್ಲೂ 4-60 ವರ್ಷದ 480 ಜನರ ಮೇಲೆ ಈ ಲಸಿಕೆಯ ಪ್ರಯೋಗ ನಡೆಸಲಾಗಿದೆ. ಅದಾಗ್ಯೂ ಮಾರುಕಟ್ಟೆ ಪ್ರವೇಶದ 6 ತಿಂಗಳ ಒಳಗಾಗಿ ಅದರ ಪರಿಣಾಮಗಳ ಬಗ್ಗೆ ಮತ್ತೊಮ್ಮೆ ಅಧ್ಯಯನ ಮಾಡಬೇಕು ಎಂದ ಶರತ್ತನ್ನು ತಜ್ಞ ಸಮಿತಿ ವಿಧಿಸಿದೆ.