ಉತ್ತರಾಖಂಡ: ಗುಂಡಿಕ್ಕಿ ಸಿಖ್‌ ಧರ್ಮಗುರು ಹತ್ಯೆ

| Published : Mar 29 2024, 12:45 AM IST / Updated: Mar 29 2024, 08:36 AM IST

ಸಾರಾಂಶ

ಉತ್ತರಾಖಂಡದ ಪ್ರಸಿದ್ಧ ನಾನಕ್‌ಮತ್ತಾ ಸಾಸಾಹಿಬ್‌ ಗುರುದ್ವಾರದ ಮುಖ್ಯಸ್ಥರಾದ ಬಾಬಾ ತರ್ಸೇಮ್‌ ಸಿಂಗ್‌ರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಗುರುವಾರ ಮುಂಜಾನೆ ನಡೆದಿದೆ.

ಡೆಹ್ರಾಡೂನ್‌/ರುದ್ರಾಪುರ: ಉತ್ತರಾಖಂಡದ ಪ್ರಸಿದ್ಧ ನಾನಕ್‌ಮತ್ತಾ ಸಾಸಾಹಿಬ್‌ ಗುರುದ್ವಾರದ ಮುಖ್ಯಸ್ಥರಾದ ಬಾಬಾ ತರ್ಸೇಮ್‌ ಸಿಂಗ್‌ರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಗುರುವಾರ ಮುಂಜಾನೆ ನಡೆದಿದೆ. 

ಮುಂಜಾನೆ 6:15ರ ವೇಳೆಗೆ ಗುರುದ್ವಾರದ ಅಂಗಳದಲ್ಲಿ ಕುರ್ಚಿಯಲ್ಲಿ ಬಾಬಾ ಕುಳಿತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತರ್ಸೇಮ್‌ ಸಿಂಗ್‌ ಅವರತ್ತ ರೈಫಲ್‌ನಿಂದ ಎರಡು ಬಾರಿ ಗುಂಡು ಹಾರಿಸಿ ಪರಾರಿಯಾದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. 

ಘಟನೆ ನಡೆದ ತಕ್ಷಣ ನೆಲಕ್ಕೆ ಬಿದ್ದ ಬಾಬಾರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಈ ಹಿಂದೆಯೂ ಬಾಬಾಗೆ ಜೀವ ಬೆದರಿಕೆ ಇತ್ತು ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸರು, ‘ಬೈಕ್‌ನಲ್ಲಿ ಬಂದವರು ಸಿಖ್‌ ಪೇಟ ಧರಿಸಿದ್ದು, ಅವರ ಪೈಕಿ ಹಿಂಬದಿ ಕುಳಿತಿದ್ದವನು ಬಾಬಾರಿಗೆ 2 ಬಾರಿ ಗುಂಡಿಕ್ಕಿರುವುದಾಗಿ ತಿಳಿದುಬಂದಿದೆ. 

ಅವರ ಪತ್ತೆಗೆ 8 ಪಡೆಗಳನ್ನು ರಚಿಸಲಾಗಿದ್ದು, ವಿಶೇಷ ತನಿಖಾ ದಳವನ್ನು ರಚಿಸಿ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟಲಾಗುವುದು’ ಎಂದು ತಿಳಿಸಿದ್ದಾರೆ.