ಸಿಬ್ಬಂದಿಗೆ ಸರಿಯಾದ ವಿರಾಮ ನೀಡದ ಏರಿಂಡಿಯಾಗೆ ₹80 ಲಕ್ಷ ದಂಡ!

| Published : Mar 23 2024, 01:01 AM IST

ಸಾರಾಂಶ

ಸಿಬ್ಬಂದಿಗೆ ಸರಿಯಾದ ವಿರಾಮ ನೀಡದ ಕಾರಣ ಏರ್‌ ಇಂಡಿಯಾ ಸಂಸ್ಥೆಗೆ 80 ಲಕ್ಷ ರು. ದಂಡ ವಿಧಿಸಿ ಡಿಜಿಸಿಎ ಆದೇಶಿಸಿದೆ.

ನವದೆಹಲಿ: ವಿಮಾನದ ಸಿಬ್ಬಂದಿಗಳಿಗೆ ಸರಿಯಾಗ ವಿರಾಮ ಅವಧಿಯನ್ನು ನೀಡದ ಕಾರಣ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 80 ಲಕ್ಷ ರು. ದಂಡ ಹಾಕಿದೆ.

ಏರ್‌ ಇಂಡಿಯಾ ಸಂಸ್ಥೆ ತನ್ನ ಪೈಲಟ್‌ ಸೇರಿದಂತೆ ಕ್ಯಾಬಿನ್‌ ಸಿಬ್ಬಂದಿಗಳಿಗೆ ಒಂದು ಪ್ರಯಾಣದ ಬಳಿಕ ಮತ್ತೊಂದು ಪ್ರಯಾಣದ ನಡುವೆ ಸರಿಯಾದ ವಿರಾಮವನ್ನು ನೀಡುತ್ತಿಲ್ಲ ಎಂಬ ವಿಷಯದ ಮೇಲೆ ಡಿಜಿಸಿಎ ಮಾ.1ರಂದು ಶೋಕಾಸ್‌ ನೋಟಿಸ್‌ ನೀಡಿತ್ತು. ಏರ್‌ ಇಂಡಿಯಾ ಇದಕ್ಕೆ ಸರಿಯಾದ ಉತ್ತರ ನೀಡದ ಕಾರಣ ಸ್ಥಳ ಪರಿಶೀಲನೆ ನಡೆಸಿತು. ಜೊತೆಗೆ ಅವಧಿಗಿಂತ ಅಧಿಕ ಸಮಯ ಕೆಲಸ, ತಪ್ಪಾದ ತರಬೇತಿ ದಾಖಲೆ ಸಲ್ಲಿಸಿದ್ದಕ್ಕೆ 80 ಲಕ್ಷ ರು. ದಂಡ ಪಾವತಿ ಮಾಡುವಂತೆ ಆದೇಶಿಸಿದೆ.