ಬಾಲಿವುಡ್‌ನ ಸ್ಪುರದ್ರೂಪಿ ನಟ ಧರ್ಮೇಂದ್ರ ಇನ್ನಿಲ್ಲ

| N/A | Published : Nov 25 2025, 02:00 AM IST / Updated: Nov 25 2025, 04:28 AM IST

dharmendra
ಬಾಲಿವುಡ್‌ನ ಸ್ಪುರದ್ರೂಪಿ ನಟ ಧರ್ಮೇಂದ್ರ ಇನ್ನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿ ಚಿತ್ರರಂಗ ಕಂಡ ಅಪರೂಪದ ಸ್ಪುರದ್ರೂಪಿ ನಟ, 65 ವರ್ಷಗಳ ವೃತ್ತಿಜೀವನದಲ್ಲಿ ಸತ್ಯಕಂನಿಂದ ಹಿಡಿದು ಶೋಲೆಯವರೆಗೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಧಮೇಂದ್ರ (89) ಸೋಮವಾರ ಇಲ್ಲಿ ನಿಧನರಾದರು.

 ಮುಂಬೈ: ಹಿಂದಿ ಚಿತ್ರರಂಗ ಕಂಡ ಅಪರೂಪದ ನಟ, 65 ವರ್ಷಗಳ ವೃತ್ತಿಜೀವನದಲ್ಲಿ ಸತ್ಯಕಂನಿಂದ ಹಿಡಿದು ಶೋಲೆಯವರೆಗೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಧಮೇಂದ್ರ (89) ಸೋಮವಾರ ಇಲ್ಲಿ ನಿಧನರಾದರು. ಕೆಲ ಕಾಲಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟನನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ಸಾವಿನ ಕುರಿತು ಹಲವು ಬಾರಿ ವದಂತಿ ಹಬ್ಬಿತ್ತು. ಅದರ ಬೆನ್ನಲ್ಲೇ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಅವರನ್ನು ಮನೆಗೆ ಕರೆ ತರಲಾಗಿತ್ತು.

ಬಾಲಿವುಡ್‌ನ ಹೀ- ಮ್ಯಾನ್‌

ಆದರೆ ಸೋಮವಾರ ಬೆಳಗ್ಗೆ ಅವರು ಸ್ವಗೃಹದಲ್ಲಿ ಇಹಲೋಹ ತ್ಯಜಿಸಿದರು. ಬಾಲಿವುಡ್‌ನ ಹೀ- ಮ್ಯಾನ್‌ ಎಂದೇ ಖ್ಯಾತಿ ಹೊಂದಿದ್ದ ಸ್ವುರದ್ರೂಪಿ ನಟ, ಪತ್ನಿಯರಾದ ಪ್ರಕಾಶ್‌ ಕೌರ್‌, ಹೇಮಾ ಮಾಲಿನಿ, ಪುತ್ರರಾದ ಸನ್ನಿ ಡಿಯೋಲ್‌, ಬಾಬಿ ಡಿಯೋಲ್‌, ಪುತ್ರಿಯರಾದ ವಿಜೇತಾ, ಅಜೀತಾ, ಇಶಾ ಮತ್ತು ಅಹಾನಾ ಡಿಯೋಲ್‌ ಅವರನ್ನು ಅಗಲಿದ್ದಾರೆ. ಸೋಮವಾರ ಸಂಜೆ ಮುಂಬೈನ ಪವನ್‌ ಹನ್ಸ್‌ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ  ಗಣ್ಯರು  ಕಂಬನಿ

ಖ್ಯಾತ ನಟನ ಅಗಲಿಕೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿಂದಿ ಸೇರಿದಂತೆ ದೇಶದ ಚಿತ್ರರಂಗದ ಗಣ್ಯರು, ಉದ್ಯಮಿಗಳು ಕಂಬನಿ ಮಿಡಿದಿದ್ದಾರೆ.

Read more Articles on