ಧರ್ಮೇಂದ್ರ ಆರೋಗ್ಯ ಸ್ಥಿರ, ವದಂತಿಹಬ್ಬಿಸಬೇಡಿ: ಕುಟುಂಬಸ್ಥರ ಮನವಿ

| Published : Nov 12 2025, 02:00 AM IST

ಧರ್ಮೇಂದ್ರ ಆರೋಗ್ಯ ಸ್ಥಿರ, ವದಂತಿಹಬ್ಬಿಸಬೇಡಿ: ಕುಟುಂಬಸ್ಥರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಧರ್ಮೇಂದ್ರ ಅವರ ಅರೋಗ್ಯ ಸ್ಥಿರವಾಗಿದ್ದು, ಸುಳ್ಳು ಸುದ್ದಿ ಹರಡಬೇಡಿ ಎಂದು ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

- ನಟನ ಸಾವಿನ ಬಗ್ಗೆಗಿನ ಊಹಾಪೋಹಕ್ಕೆ ಅಸಮಾಧಾನ

- ಪತ್ನಿ ಹೇಮಾಮಾಲಿನಿ, ಪುತ್ರಿ ಇಶಾ ಜಾಲತಾಣದಲ್ಲಿ ಪೋಸ್ಟ್‌ಪಿಟಿಐ ಮುಂಬೈ

ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಧರ್ಮೇಂದ್ರ ಅವರ ಅರೋಗ್ಯ ಸ್ಥಿರವಾಗಿದ್ದು, ಸುಳ್ಳು ಸುದ್ದಿ ಹರಡಬೇಡಿ ಎಂದು ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಂಗಳವಾರ ಮುಂಜಾನೆ ಹಲವು ಸುದ್ದಿ ಮಾಧ್ಯಮಗಲ್ಲಿ ಧರ್ಮೇಂದ್ರ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಇದಕ್ಕೆ ಅವರ ಪತ್ನಿ ಹೇಮಾ ಮಾಲಿನಿ ಮತ್ತು ಪುತ್ರಿ ಇಶಾ ಡಿಯೋಲ್‌ ಗರಂ ಆಗಿದ್ದು ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.‘ಈಗ ಏನಾಗುತ್ತಿದೆಯೋ ಅದು ಖಂಡಿತ ಕ್ಷಮೆಗೆ ಅರ್ಹವಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿರುವವರ ಬಗ್ಗೆ ಜವಾಬ್ದಾರಿಯುತ ಚಾನೆಲ್‌ಗಳು ಸುಳ್ಳು ಸುದ್ದಿಗಳನ್ನು ಹರಡಬಹುದೇ? ಇದು ಬೇಜವಾಬ್ದಾರಿ. ಈ ಸಂದರ್ಭದಲ್ಲಿ ದಯವಿಟ್ಟು ತಮ್ಮ ಕುಟುಂಬದ ಗೌಪ್ಯತೆ ಕಾಪಾಡಿ’ ಎಂದು ಹೇಮಾ ಕೋರಿದ್ದಾರೆ, ಇಶಾ ಕೂಡ ಈ ಬಗ್ಗೆ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, ‘ಮಾಧ್ಯಮಗಳ ಅತಿರೇಕದಲ್ಲಿದ್ದು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ತಂದೆಯ ಆರೋಗ್ಯ ಸ್ಥಿರವಾಗಿದೆ. ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.