ಸಾರಾಂಶ
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರಿಗೆ ಅವರ ಪತ್ನಿಯೇ ಕೆನ್ನೆಗೆ ಬಾರಿಸಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹನಾಯ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರಿಗೆ ಅವರ ಪತ್ನಿಯೇ ಕೆನ್ನೆಗೆ ಬಾರಿಸಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಆಗ್ನೇಯ ಏಷ್ಯಾ ಪ್ರವಾಸದ ಭಾಗವಾಗಿ ಮ್ಯಾಕ್ರಾನ್ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ಅವರೊಂದಿಗೆ ಭಾನುವಾರ ಸಂಜೆ ವಿಯೆಟ್ನಾಂನ ಹನಾಯ್‌ಗೆ ಬಂದಿಳಿದಿದ್ದರು. ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಪತ್ನಿ ತಮ್ಮ ಎರಡೂ ಕೈಗಳಿಂದ ಮ್ಯಾಕ್ರಾನ್ ಅವರ ಮುಖಕ್ಕೆ ತಿವಿದು ಅವರನ್ನು ಹಿಂದಕ್ಕೆ ತಳ್ಳಿದ್ದಾರೆ.
ಇದರಿಂದ ಅರೆಕ್ಷಣ ವಿಚಲಿತರಾದಂತೆ ಕಂಡ ಮ್ಯಾಕ್ರಾನ್ ತಕ್ಷಣವೇ ಸುಧಾರಿಸಿಕೊಂಡು, ತಮ್ಮನ್ನು ಸ್ವಾಗತಿಸಲು ಬಂದ ನಿಯೋಗದತ್ತ ಕೈಬೀಸಿ ಮುಗುಳ್ನಗೆ ಬೀರುತ್ತಾರೆ. ಕಪಾಳಮೋಕ್ಷ ಮಾಡುವ ವೇಳೆ ಪತ್ನಿಯ ಮುಖ ಮರೆಯಾಗಿದ್ದು, ಆ ಬಳಿಕ ಇಬ್ಬರೂ ಒಟ್ಟಿಗೆ ವಿಮಾನದ ಮೆಟ್ಟಿಲುಗಳನ್ನು ಇಳಿದು ಬರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆದರೆ ‘ತಾವಿಬ್ಬರೂ ತಮಾಷೆ ಮಾಡುತ್ತಿದ್ದೆವು, ಈ ಘಟನೆಯನ್ನು ಅತಿಯಾಗಿ ಪ್ರಚಾರ ಮಾಡಲಾಗುತ್ತಿದೆ’ ಎಂದು ಮ್ಯಾಕ್ರಾನ್ ತಿಳಿಸಿದ್ದಾರೆ. ಬ್ರಿಗೆಟ್ಟಿ ಶಿಕ್ಷಕಿಯಾಗಿದ್ದು, ತಮಗಿಂತ ಹಿರಿಯ ವಯಸ್ಸಿನ ಆಕೆಯನ್ನು ಕೆಲ ವರ್ಷಗಳ ಹಿಂದೆ ಮ್ಯಾಕ್ರಾನ್ ವರಿಸಿದ್ದರು.